ಬೆಳ್ತಂಗಡಿ: ಸಂಶಯಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆ ಘಟನೆ ನ.03ರಂದು ಉಜಿರೆ ಬೆಳಾಲಿನ ಮಾಚಾರು ಬಳಿಯ ಕೆಂಪನೊಟ್ಟುವಿನಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಸುಧಾಕರ ಅವರ ಪತ್ನಿ ಶಶಿಕಲಾ (27 ) ಎಂದು ಗುರುತಿಸಲಾಗಿದೆ. ಇದು ಆಕಸ್ಮಿಕ ಘಟನೆಯೇ, ಅಥವಾ ಕೊಲೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ.
ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಹಾಗೂ ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಡಿ ಹಾಗೂ ಪೊಲೀಸ್ ತಂಡ ಭೇಟಿ ನೀಡಿ ತನಿಖೆಗೆ ಮುಂದಾಗಿದ್ದಾರೆ. ಮೃತ ಮಹಿಳೆಗೆ 6 ವರ್ಷದ ಮಗುವಿದೆ.
ಮೃತ ಮಹಿಳೆಯ ಕುಟುಂಬಸ್ಥರಿಂದ ಕೊಲೆ ಆರೋಪ
ಟ್ಯಾಪಿಂಗ್ ಕೆಲಸ ಮಾಡುತ್ತಿರುವ ಸುಧಾಕರ್ ಮತ್ತು ಶಶಿಕಲಾ ನಡುವೆ ಗಲಾಟೆ ನಡೆದು ನಂತರ ಶಶಿಕಲಾಳನ್ನು ಕೊಲೆ ಮಾಡಿ ಬಾವಿಗೆ ಹಾಕಲಾಗಿದೆ ಎಂದು ಮೃತ ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಸುಧಾಕರ್ ನಾಯ್ಕ್ ನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.