ಬೆಳ್ಳಾರೆ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಪತ್ತೆಗೆ ಮುಂದುವರಿದ ಕಾರ್ಯಾಚರಣೆ: ಆರೋಪಿ ನೌಷದ್ ಸುಳಿವು ನೀಡಿದವರಿಗೆ 2.ಲಕ್ಷ ರೂ ಬಹುಮಾನ: ಎನ್.ಐ.ಎ ಅಧಿಕಾರಿಗಳಿಂದ ಸಾರ್ವಜನಿಕ ಪ್ರಕಟಣೆ

ಬೆಳ್ತಂಗಡಿ : ಬೆಳ್ಳಾರೆಯ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 23ನೇ ಆರೋಪಿಯಾಗಿರುವ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷದ್(32) ಪತ್ತೆಗೆ ಸುಳಿವು ನೀಡಿದ್ದಲ್ಲಿ 2.ಲಕ್ಷ ರೂ. ಬಹುಮಾನ ನೀಡುವುದಾಗಿ ಬೆಂಗಳೂರು ಎನ್.ಐ.ಎ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಿಷೇಧಿತ ಪಿ.ಎಫ್.ಐ ಸಂಘಟನೆ ಕಾರ್ಯಕರ್ತ ನೌಷದ್, ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಲು ಸಹಕರಿಸಿದ ಹಿನ್ನೆಲೆಯಲ್ಲಿ ಎನ್.ಐ.ಎ ಅಧಿಕಾರಿಗಳು ಈ ಮೊದಲೇ ಪಡಂಗಡಿಯಲ್ಲಿರುವ ಮನೆಗೆ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ನೌಷದ್ ಪ್ರಕರಣ ನಡೆದ ಬಳಿಕ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಎನ್.ಐ.ಎ ಅಧಿಕಾರಿಗಳು ನೋಟಿಸ್ ನೀಡಿ ಹೋಗಿದ್ದರು.

ಇದೀಗ ನೌಷದ್ ಕುರಿತು ಎನ್.ಐ.ಎ ಅಧಿಕಾರಿಗಳಿಗೆ ಸುಳಿವು ನೀಡಿದರೆ ಆ ವ್ಯಕ್ತಿಯ ಮಾಹಿತಿಯನ್ನು ಗೌಪ್ಯವಾಗಿಟ್ಟು ಆ ವ್ಯಕ್ತಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್.ಐ.ಎ ಅಧಿಕಾರಿಗಳು ಘೋಷಣೆ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

error: Content is protected !!