ಉಜಿರೆ: ಜೇನು ಕೃಷಿ ಮತ್ತು ಅಣಬೆ ಬೇಸಾಯದ ಪ್ರತ್ಯೇಕ್ಷಿಕೆ ಮತ್ತು ತಾಂತ್ರಿಕ ತರಬೇತಿ

ಬೆಳ್ತಂಗಡಿ: ಜೇನು ಮತ್ತು ಅಣಬೆ ಕೃಷಿಗೆ ಕರಾವಳಿಯಲ್ಲಿ ಉತ್ತಮ ಮಾರುಕಟ್ಟೆ ಇದೆ, ಹೆಚ್ಚಿನ ಕೃಷಿಕರು ಈ ಬೇಸಾಯವನ್ನು ಮಾಡಬಹುದಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್ ಎಚ್ ಮಂಜುನಾಥ್  ತಿಳಿಸಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕರಿ ಸಂಘ ನಿಯಮಿತ, ಧರ್ಮಸ್ಥಳ ಇದರ ಸಹಕಾರದೊಂದಿಗೆ ಸಿದ್ಧವನ ನರ್ಸರಿ ನೀರಚಿಲುಮೆ ಉಜಿರೆಯಲ್ಲಿ ಆಯೋಜಿಸಿದ ಜೇನು ಕೃಷಿ ಮತ್ತು ಅಣಬೆ ಬೇಸಾಯದ ಪ್ರತ್ಯೇಕ್ಷಿಕೆ ಮತ್ತು ತಾಂತ್ರಿಕ ತರಬೇತಿ ಕಾರ್ಯಕಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಕೃಷಿಯನ್ನು ಮಾಡಿಕೊಂಡಾಗ ಇದರಲ್ಲಿ ನಾನು ಯಶಸ್ಸು ಸಾಧಿಸುತ್ತೇನೆ ಎನ್ನುವ ಧೈರ್ಯದಿಂದ ಛಲದಿಂದ ಕೃಷಿಯನ್ನು ಮಾಡಬೇಕು, ಕೃಷಿಯಲ್ಲಿ ಒಮ್ಮೆ ಸೋತಾಗ ಯಾವತ್ತೂ ಕೂಡ ಕುಗ್ಗದೆ ಮತ್ತೊಮ್ಮೆ ಪುನರತಿ ಪ್ರಯತ್ನಿಸಿ ಯಶಸ್ಸನ್ನು ಪಡೆಯಬೇಕು. ಅಣಬೆ ಮತ್ತು ಜೇನು ಕೃಷಿಗೆ ಅತ್ಯುತ್ತಮವಾದ ಮಾರುಕಟ್ಟೆಯು ಈಗಿನ ಸಮಯದಲ್ಲಿ ಇದ್ದು, ಅಣಬೆ ಮತ್ತು ಜೇನು ಆರೋಗ್ಯಕರ ಔಷಧೀಯ ಗುಣಗಳನ್ನು ಹೊಂದಿರುವ ಕಾರಣ ಮುಂದಕ್ಕೂ ಕೂಡ ಉತ್ತಮವಾದ ಮಾರುಕಟ್ಟೆ ಇರುವ ಕಾರಣವಾಗಿ ಅತಿ ಹೆಚ್ಚು ರೈತರು ಇದನ್ನು ಅನುಷ್ಠಾನಿಸಬೇಕೆಂದು ತಿಳಿಸಿದರು,

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಕೃಷಿಕರು ಮತ್ತು ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್ ಎಂ, ಜೇನು ಕೃಷಿಯನ್ನು ನಾವು ಮಾಡಿಕೊಂಡಾಗ ನಮ್ಮಲ್ಲಿರುವ ಇತರ ಕೃಷಿಯಲ್ಲಿಯೂ ಅತಿ ಹೆಚ್ಚು ಆದಾಯವನ್ನು ಪಡೆಯಬಹುದು, ಅಣಬೆಯು ಅತ್ಯುತ್ತಮವಾದ ಪೋಷಕಾಂಶಗಳನ್ನು ಒಳಗೊಂಡ ಉತ್ತಮ ಆಹಾರವಾಗಿದೆ ಎಂದು ತಿಳಿಸಿದರು.

ಬಾಲಕೃಷ್ಣ ಪೂಜಾರಿ ಪ್ರಬಂಧಕರು ತೋಟಗಾರಿಕೆ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀನಿವಾಸ ರಾವ್ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಧರ್ಮಸ್ಥಳ ಇವರು ಈ ತರಬೇತಿಯ ಸದುಪಯೋಗವನ್ನು ತರಬೇತಿಯಲ್ಲಿ ಭಾಗವಹಿಸಿದ ಎಲ್ಲರೂ ಪಡೆಯುವಂತೆ ತಿಳಿಸಿದರು.

ಕೆ ಎಸ್ ಚಂದ್ರಶೇಖರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಬೆಳ್ತಂಗಡಿ ಇವರು ತೋಟಗಾರಿಕಾ ಇಲಾಖೆಯ ಸವಲತ್ತಿನ ಬಗ್ಗೆ ಮಾಹಿತಿಯನ್ನು ನೀಡಿದರು. ಮಧುರ ಪ್ರಗತಿಪರ ಕೃಷಿಕರು ಬೆಳಾಲು ಇವರು ಅಣಬೆ ಕೃಷಿ ಮಾಡುವ ಪದ್ಧತಿಯ ಬಗ್ಗೆ ರೈತರೊಂದಿಗೆ ಸಂವಾದ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು. ಬಾಬು ಎಂ ಕೆ ಜೇನು ಕೃಷಿಕರು ಧರ್ಮಸ್ಥಳ ಇವರು ರೈತರೊಂದಿಗೆ ಸಂವಾದ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.

ಪ್ರೀತಮ್ ಡಿ,ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಧರ್ಮಸ್ಥಳ, ಭುಜಬಲಿ, ಗೌರವ ಸಲಹೆಗಾರರು ಭಜನಾ ಪರಿಷತ್ ಧರ್ಮಸ್ಥಳ, ಹರಿ,ನಿವೃತ್ತ ಪ್ರಾದೇಶಿಕ ನಿರ್ದೇಶಕರು ಕೇಂದ್ರ ಕಚೇರಿ ಧರ್ಮಸ್ಥಳ, ದಯಾನಂದ ಗೌಡ, ನರ್ಸರಿ ಯೋಜನಾಧಿಕಾರಿ ಕೇಂದ್ರ ಕಚೇರಿ ಧರ್ಮಸ್ಥಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಕಚೇರಿಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂದು ಸ್ವಸಹಾಯ ಸಂಘದ ಕೃಷಿಕರು ಉಪಸ್ಥಿತರಿದ್ದು ತರಬೇತಿಯನ್ನು ಪಡೆದುಕೊಂಡರು.

ಸುಧೀರ್ ಜೈನ್, ಯೋಜನಾಧಿಕಾರಿಗಳು ಕೃಷಿ ವಿಭಾಗ ಕೇಂದ್ರ ಕಚೇರಿ ಧರ್ಮಸ್ಥಳ ಸ್ವಾಗತಿಸಿ, ಸುರೇಂದ್ರ ಯೋಜನಾಧಿಕಾರಿಗಳು ಬೆಳ್ತಂಗಡಿ ತಾಲೂಕು ವಂದಿಸಿ, ರಾಮ್ ಕುಮಾರ್ ಕೃಷಿ ಅಧಿಕಾರಿ ನಿರೂಪಿಸಿದರು.

error: Content is protected !!