ಬೆಳ್ತಂಗಡಿ: ಯುವಜನ ಒಕ್ಕೂಟ (ರಿ) ಬೆಳ್ತಂಗಡಿ ಇದರ ಆಶ್ರಯಲ್ಲಿ ಶ್ರೀ ಯುವಕ ಮಂಡಲ ಮುಂಡತ್ತೋಡಿ ಉಜಿರೆ ಇದರ ಸಾರಥ್ಯದಲ್ಲಿ ತಾಲೂಕಿನ ವಿವಿಧ ಯುವಕ–ಯುವತಿ ಹವ್ಯಾಸಿ ಮಂಡಲ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಸಹಕಾರದೊಂದಿಗೆ ‘ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ದ ಗೊಬ್ಬು ಗ್ರಾಮೀಣ ಸೊಗಡಿನ ಕ್ರೀಡಾ ಕೂಟವು’ ಅ. 29ರಂದು ಉಜಿರೆ ಗ್ರಾಮದ ಚಾವಡಿ ಬೈಲು ಮುಂಡತ್ತೋಡಿ ಇಲ್ಲಿ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜಾ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕ್ರೀಡಾ ಜ್ಯೋತಿ ಭವ್ಯ ಮೆರವಣಿಗೆಯ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣಪಡ್ವೆಟ್ನಾಯರು ನೆರವೇರಿಸಲಿದ್ದಾರೆ. ಕ್ರೀಡಾಂಗಣದ ಉದ್ಘಾಟನೆಯನ್ನು ಹರೀಶ್ ಕುಮಾರ್ ಶಾಸಕರು ವಿಧಾನ ಪರಿಷತ್ ಕರ್ನಾಟಕ ಸರಕಾರ ಇವರು ನೆರವೇರಿಸಲಿದ್ದಾರೆ.
ಯುವಜನ ಒಕ್ಕೂಟದ ಅಧ್ಯಕ್ಷರಾದ ರಮಾನಂದ ಸಾಲಿಯಾನ್ ಇವರು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಪ್ರತಾಪಸಿಂಹ ನಾಯಕ್ ಶಾಸಕರು ವಿಧಾನ ಪರಿಷತ್ ಕರ್ನಾಟಕ ಸರಕಾರ, ಕೆ. ಮೋಹನ್ ಕುಮಾರ್ ಲಕ್ಷಿö್ಮÃ ಗ್ರೂಪ್ಸ್ ಮಾಲಕರು ಉಜಿರೆ, ಉಷಾಕಾರಂತ್ ಅಧ್ಯಕ್ಷರು ಗ್ರಾಮ ಪಂಚಾಯತ್ ಉಜಿರೆ ಹಾಗೂ ಮಾಜಿ ಶಾಸಕರುಗಳು, ರಾಜಕೀಯ ಪಕ್ಷಗಳ ಮುಖಂಡರು, ದಾನಿಗಳು ಭಾಗವಹಿಸಲಿದ್ದಾರೆ.
ತಾಲೂಕಿನ 81 ಗ್ರಾಮಗಳಿಂದ ಸುಮಾರು 35ಕ್ಕಿಂತಲೂ ಹೆಚ್ಚು ಸಂಘಟನೆಗಳಿAದ ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ. ತಾಲೂಕಿನ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಯುವಕ ಮತ್ತು ಯುವತಿ ಮಂಡಲದ ಸದಸ್ಯರಿಗೆ ಪ್ರತ್ಯೇಕ- ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದ್ದು ಹಗ್ಗಜಗ್ಗಾಟ, ವಾಲಿಬಾಲ್, ರಿಲೇ ಓಟ, ಉಪ್ಪು ಮುಡಿ, ಮಡಕೆ ಒಡೆಯುವುದು, ಯುವತಿಯರಿಗೆ ಹಗ್ಗ ಜಗ್ಗಾಟ, ತ್ರೋಬಾಲ್, ಗೂಟ ಸುತ್ತುವುದು, ಯುವಕ, ಯುವತಿಯರಿಗೆ ನಿಧಿ ಶೋಧನೆ ಹಾಗು ಎಲ್ಲಾ ಸ್ಪರ್ಧಾ ವಿಜೇತರಿಗೆ ಟ್ರೋಫಿಯ ಜೊತೆಗೆ ನಗದು ಬಹುಮಾನ ಲಭಿಸಲಿದೆ. ಸ್ಥಳೀಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಜನೀಶ್ ಅಧ್ಯಕ್ಷರು, ಶ್ರೀ ಯುವಕ ಮಂಡಲ ಮುಂಡತ್ತೋಡಿ, ಅಧ್ಯಕ್ಷತೆ ವಹಿಸಲಿದ್ದಾರೆ. ರಕ್ಷಿತ್ ಶಿವರಾಮ್ ಅಧ್ಯಕ್ಷರು ಬೆಸ್ಟ್ ಪೌಂಡೇಶನ್ ಬೆಳ್ತಂಗಡಿ ಇವರು ಬಹುಮಾನ ವಿತರಣೆ ಮಾಡಲಿದ್ದಾರೆ. ನಂತರ ಸ್ಥಳೀಯ ಮಕ್ಕಳಿಂದ ಮತ್ತು ಬೆದ್ರ ಕಲಾವಿದೆರ್ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ.