ನ್ಯಾಯತರ್ಪು : ಸಿಡಿಲು ಬಡಿದು 3 ಮನೆಗಳಿಗೆ ಹಾನಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

ನ್ಯಾಯತರ್ಪು: ಅ.12 ರಂದು ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ನ್ಯಾಯತರ್ಪು ಗ್ರಾಮದ 3 ಮನೆಗಳಿಗೆ ಸಿಡಿಲು ಬಡಿದಿದೆ.

ನಾಳ ದೇವಿ ನಗರ ಶಂಕರ ಶೆಟ್ಟಿ ,ಕೃಷ್ಣಪ್ಪ ಪೂಜಾರಿ ಮತ್ತು ಅಂಬಿಕಾ ಇವರ ಮನೆಗೆ ಸಿಡಿಲು ಬಡಿದಿದ್ದು ಅ.13ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್ ,ಅಬ್ದುಲ್ ಲತೀಪ್ ,ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ನಾಳ, ಹಾಗೂ ಸ್ಥಳೀಯರು ಜೊತೆಗಿದ್ದರು.

error: Content is protected !!