ಬೆಳ್ತಂಗಡಿ: ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಅಕ್ಟೋಬರ್ 7ರಂದು ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ನೇತೃತ್ವದಲ್ಲಿ ಗೇರುಕಟ್ಟೆಯ ಕ್ರೀಡಾಂಗಣದಲ್ಲಿ ನಡೆಯಿತು.
ನಿಖಿಲ್ ದೇವಾಡಿಗ 100 ಮೀಟರ್ ಮತ್ತು ಎತ್ತರ ಜಿಗಿತ ಪ್ರಥಮ ಹಾಗೂ 200 ಮೀಟರ್ ದ್ವಿತೀಯ, ದಿಯಾ ಚಂದನ ಎತ್ತರ ಜಿಗಿತ ಪ್ರಥಮ ಮತ್ತು ಈಟಿ ಎಸೆತ ದ್ವಿತೀಯ, ಅಂಕಿತ ಜೆ ಎನ್ ಚಕ್ರ ಎಸೆತ ಪ್ರಥಮ, ಸಂಜನಾ ಎ ಗುಂಡು ಎಸೆತ ಪ್ರಥಮ, ಹಿತೇಶ್ ಎತ್ತರ ಜಿಗಿತ ದ್ವಿತೀಯ, ಪ್ರತೀಕ್ಷಾ 400 ಮೀಟರ್ ದ್ವಿತೀಯ, ಚೇತನ ರೂಪ ಚಕ್ರಎಸೆತ ದ್ವಿತೀಯ, ಧೀರಜ್ ತ್ರಿವಿಧ ಜಿಗಿತ ದ್ವಿತೀಯ ಮತ್ತು 100 ಮೀಟರ್ ತೃತೀಯ, ಯಶ್ವಿನ್ ಉದ್ದ ಜಿಗಿತ ಪ್ರಥಮ ಹಾಗೂ ತ್ರಿವಿಧ ಜಿಗಿತ ತೃತೀಯ, ಸನ್ನಿಧಿ ಉದ್ದ ಜಿಗಿತ ಹಾಗೂ ತ್ರಿವಿಧ ಜಿಗಿತ ಪ್ರಥಮ, ಶರಣ್ಯ ತ್ರಿವಿಧ ಜಿಗಿತ ದ್ವಿತೀಯ, ಸಲ್ಮಾ ಶಹನಾಝ್ – ಈಟಿ ಎಸತ- ಪ್ರಥಮ ಸ್ಥಾನ ಪಡೆದಿದ್ದಾರೆ.
4X100 ಮೀಟರ್ ರಿಲೇ ಬಾಲಕರ ತಂಡ ದ್ವಿತೀಯ ಹಾಗೂ ಬಾಲಿಕೆಯರ ತಂಡ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಒಟ್ಟು 10 ಪ್ರಥಮ ಸ್ಥಾನ, 5 ದ್ವಿತೀಯ, 5 ತೃತೀಯ ಸ್ಥಾನ ಹೀಗೆ ಒಟ್ಟು 20 ಪದಕಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಈ ಹಿಂದಿನ ದೈಹಿಕ ಶಿಕ್ಷಕರಾಗಿದ್ದ ಸತ್ಯಕಿರಣ್ ಕುಮಾರ್ ಉಡುಪಿ, ಪ್ರಸ್ತುತ ದೈಹಿಕ ಶಿಕ್ಷಕ ಆಗಿರುವ ಮೋಹನಂದ, ಹಾಗೂ ತರಬೇತುದಾರ ಸ್ನೇಹಿತ ರಾಜೇಶ್ ಇವರಿಗೆ ಹಾಗೂ ಶಿಕ್ಷಕ ಬಳಗಕ್ಕೆ ಉಪ ಪ್ರಾಂಶುಪಾಲರಾದ ಉದಯ್ ಕುಮಾರ್ ಬಿ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.