ಬೆಳ್ತಂಗಡಿ: ಗಾಂಧಿಜೀಯವರ ಹುಟ್ಟು ಹಬ್ಬ ನಮ್ಮೆಲ್ಲರ ಹಬ್ಬವಾಗಿದೆ, ಗಾಂಧಿಜೀಯವರು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದರು, ಹೆಣ್ಣು-ಗಂಡುವಿನ ನಡುವೆ ತಾರತಮ್ಯ ಬೇಡ, ಎಲ್ಲರೂ ಸರಿ ಸಮಾನರು ಎಂಬ ಮನೋಭಾವನೆ ಇರಬೇಕು ಎಂದರು. ಇಂತಹ ಮಕ್ಕಳ ಸೇವೆ ಒಂದು ಬಗೆಯ ದೇಶ ಪ್ರೇಮವಾಗಿದೆ. ಗಡಿ ಕಾಯುವ ಸೈನಿಕರ ದೇಶಪ್ರೇಮದಂತೆಯೇ ಇಂತಹ ಮಕ್ಕಳ ಸೇವೆ ಮಾಡಬೇಕು ಎಂದು ದಯಾ ವಿಶೇಷ ಸಂಸ್ಥೆಯ ನಿರ್ದೇಶಕ ವಂ. ಫಾ. ವಿನೋದ್ ಮಸ್ಕರೇನ್ಹಸ್ ಹೇಳಿದರು.
ಅವರು ದಯಾ ವಿಶೇಷ ಶಾಲೆಯಲ್ಲಿ ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಗಾಂಧಿಜೀಯವರ ಅಭಿವ್ಯಕ್ತಿ, ಸ್ವಾತಂತ್ರವನ್ನು ಸದುಪಯೊಗ ಮಾಡುತ್ತ, ಜನರ ಹಿತವನ್ನು ಕಾಪಾಡಿದರು. ಬ್ರೀಟಿಷ್ ಹಾಗೂ ಸರಕಾರದ ವಿರುದ್ಧ ಹೊರಾಟ ಮಾಡಿ ಉಪ್ಪಿನ ಸತ್ಯಾಗ್ರಹದೊಂದಿಗೆ ಹಲವಾರು ಜನ ವಿರೋಧಿ ದೊರಣೆಗಳನ್ನು ದಿಕ್ಕರಿಸಿದರು. ಗಾಂಧಿಜೀಯವರ ಜೀವನ ಅವರ ಆದರ್ಶ ತತ್ವಗಳಾದ ಅಹಿಂಸೆ, ಸಮಾನತೆ, ಭ್ರಾತೃತ್ವ ಭಾವನೆಯ ಅಂಶಗಳನ್ನು ನಾವು ಮೈಗೂಡಿಸಿಕೊಂಡು ಅವರಂತೆ ಆದರ್ಶ ವ್ಯಕ್ತಿಗಳಾಗೊಣ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿಯ ಎಲ್ಲಾ ಛಾಯಾಗ್ರಾಹಕರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಜನ್ವಿರಾ ಸ್ವಾಗತಿಸಿ ಶಿಕ್ಷಕಿ ಧನ್ಯ ಧನ್ಯವಾದ ಸಮರ್ಪಿಸಿದರು.