ಬೆಳ್ತಂಗಡಿ: ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಯುವಕ – ಯುವತಿ ಮಂಡಲಗಳಿಗೆ ಕ್ರೀಡಾ ಕಿಟ್ ವಿತರಿಸಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶಾಸಕರ ಕಛೇರಿ “ಶ್ರಮಿಕ” ದಲ್ಲಿ ಸೆ 26 ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ. ಜಿಲ್ಲೆ, ತಾಲೂಕು ಪಂಚಾಯತ್ ಬೆಳ್ತಂಗಡಿ ಮತ್ತು ತಾಲೂಕು ಯುವಜನ ಒಕ್ಕೂಟ ಆಶ್ರಯದಲ್ಲಿ ಆಯ್ದ ಯುವಕ- ಯುವತಿ ಮಂಡಲಗಳಿಗೆ ಕ್ರೀಡಾಕಿಟ್ ಹಸ್ತಾಂತರಿಸಿ ಮಾತನಾಡಿದರು.ತಾಲೂಕಿನ ಗ್ರಾಮೀಣ ಭಾಗದ ಯುವಕ ಯುವತಿ ಮಂಡಲಗಳ ಸದಸ್ಯರು ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡುವ ಕೆಲಸ ಶಾಸಕನ ನೆಲೆಯಲ್ಲಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜೈರಾಮ್ ಗೆಳೆಯರ ಬಳಗ ಬಂದಾರು, ಶಕ್ತಿ ಯುವಕ ಮಂಡಲ ರೇಶ್ಮೆರೋಡ್ ಓಡಿಲ್ನಾಳ, ಅರುಣೋದಯ ಯುವಕ ಮಂಡಲ ಮರೋಡಿ, ಕೀರ್ತನಾ ಕಲಾ ತಂಡ ಮುಂಡಾಜೆ, ನಿಸರ್ಗ ಯುವಜನೇತರ ಮಂಡಲ ಬರೆಂಗಾಯ ಹಾಗೂ ಮಹಿಳಾ ಮಂಡಲ ಉಜಿರೆ ಸೇರಿದಂತೆ 6 ಆಯ್ದ ಮಂಡಳಿಗಳಿಗೆ ಕ್ರೀಡಾ ಕಿಟ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ , ಜಿಲ್ಲಾ ಯುವಜನ ಒಕ್ಕೂಟ ನಿರ್ದೆಶಕ ಚಿದಾನಂದ ಇಡ್ಯಾ, ತಾಲೂಕು ಪಂಚಾಯತ್ ಮ್ಯಾನೇಜರ್ ಪ್ರಶಾಂತ್ ಬಳೆಂಜ, ಉಪಸ್ಥಿತರಿದ್ದರು.
ಸಾಂತಪ್ಪ ಸ್ವಾಗತಿಸಿದರು, ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು,