ಬೆಳ್ತಂಗಡಿ : ಹೆಚ್ಚಾದ ಕಾಡಾನೆ ಉಪಟಳ: ಪರಿಹಾರಕ್ಕೆ ಒತ್ತಾಯ : ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿ


ಬೆಳ್ತಂಗಡಿ:
ಧರ್ಮಸ್ಥಳ, ಶಿಬಾಜೆ , ಮುಂಡಾಜೆ , ಕಡಿರುದ್ಯಾವರ , ಮಿತ್ತಬಾಗಿಲು , ಮಲವಂತಿಗೆ , ಚಾರ್ಮಾಡಿ, ನೆರಿಯ , ಪುದುವೆಟ್ಟು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಕೃಷಿ ನಾಶದಿಂದ ರೈತರು ಕಂಗೆಟ್ಟಿದ್ದಾರೆ. ಈ ಗ್ರಾಮದ ಜನರು ರಾತ್ರಿ ಸಮಯದಲ್ಲಿ ಭೀತಿಯಿಂದಲೇ ಬದುಕುವಂತಾಗಿದೆ. ಹೀಗಾಗಿ ಈ ಭಾಗದಲ್ಲಿರುವ ಕಾಡಾನೆ ಉಪಟಳಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು.


ಕಾಡಾನೆ ದಾಳಿಯಿಂದ ರೈತರ ಲಕ್ಷಾಂತರ ರೂಪಾಯಿಯ ಕೃಷಿಗೆ ಹಾನಿಯಾಗುತ್ತಿದೆ, ಸಂಜೆಯ ನಂತರ ಗ್ರಾಮಸ್ಥರು ಮನೆಯಿಂದ ಹೊರಗೆ ಬರದಂತಾಗಿದೆ. ಕಾಡಾನೆಗಳನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆಗೆ ಸರ್ಕಾರ ನಿರ್ದೇಶನ ನೀಡಬೇಕು. ಮತ್ತು ಆ್ಯಂಟಿ ಡಿಪ್ರೆಡೇಷನ್ ಕ್ಯಾಂಪ್‌ನ್ನು ತುರ್ತಾಗಿ ರಚಿಸಿ ಸಿಬ್ಬಂದಿಯನ್ನು ನೇಮಕ ಮಾಡಿ ಗಸ್ತು ತಿರುಗಲು ವಾಹನದ ವ್ಯವಸ್ಥೆಯನ್ನು ಮಾಡಬೇಕೆಂದು ಮನವಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಉಪಸ್ಥಿತರಿದ್ದರು.

error: Content is protected !!