ಬೆಳ್ತಂಗಡಿ, ಸದ್ಭಾವನಾ ದಿನಾಚರಣೆ:ಪ್ರತಿಜ್ಞಾವಿಧಿ ಸ್ವೀಕಾರ:

 

 

 

ಬೆಳ್ತಂಗಡಿ : ಎಲ್ಲಾ ಧರ್ಮ ಭಾಷೆ ಹಾಗೂ ರಾಜ್ಯಗಳ ಜನರಲ್ಲಿ ಸೌಹರ್ದತೆಯನ್ನು ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು ಕೇಂದ್ರ ಸರ್ಕಾರದ ಆದೇಶದಂತೆ ಪ್ರತೀ ವರ್ಷ  ಸದ್ಭಾವನಾ ದಿನವನ್ನು ಆಚರಿಸಲಾಗುತ್ತದೆ.ಅದರಂತೆ ಆಗಸ್ಟ್‌ 20 ಆದಿತ್ಯವಾರ ಸದ್ಭಾವನಾ ದಿನಾಚರಣೆಯು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ನಡೆಯಿತು. . ಜಾತಿ ,ಧರ್ಮ,ಪ್ರದೇಶ, ಮತ ಅಥವಾ ಭಾಷೆಯ ಭೇದಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹರ್ಧಕ್ಕಾಗಿ ಕಾರ್ಯನಿರ್ವಹಿಸುತ್ತೇನೆಂದು , ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಲೀ ನಮ್ಮಲ್ಲಿರುವ ಎಲ್ಲ ಭೇದಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೇ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆ ಎಂದು ಈ ವೇಳೆ ಪ್ರತಿಜ್ಞೆ ಮಾಡಲಾಯಿತು.
ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು.ಇಲಾಖಾ ಸಿಬ್ಬಂದಿಗಳು ಪ್ರತಿಜ್ಞೆ ಸ್ವೀಕರಿಸಿದರು.

error: Content is protected !!