ಬೆಳ್ತಂಗಡಿಯಲ್ಲಿ ಭಾರೀ ಮಳೆ:ಹಲವೆಡೆ ಮನೆಗಳಿಗೆ ಹಾನಿ: ನದಿಗಳಲ್ಲಿ ನೀರಿನ ಮಟ್ಟ ಏರಿಕೆ,ಭೂಕುಸಿತದ ಆತಂಕ..!

 

 

ಬೆಳ್ತಂಗಡಿ: ತಾಲೂಕಿನಾದ್ಯಂತ ಎಡೆಬಿಡದೇ ಭಾರೀ ಮಳೆಯಾಗುತಿದ್ದು ಹಲವಾರು ಕಡೆಗಳಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ.‌

ಕಲ್ಮಂಜ ಗ್ರಾಮದ ಪಜಿರಡ್ಕ ಎಸ್ ಸಿ ಕಾಲನಿಯಲ್ಲಿ ಮನೆಯೊಂದರ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದು ಹಾನಿಯುಂಟಾಗಿದೆ. ಪಡಂಗಡಿ ಗ್ರಾಮದ ಬಾಬು ಹಾಗೂ ಕಲ್ಯಾಣಿ ಎಂಬವರ ಕೊಟ್ಟಿಗೆಗೆ ಭಾರೀ ಗಾಳಿಯಿಂದ ಹಾನಿ ಸಂಭವಿಸಿದೆ.ಮಾಲಾಡಿ ಗ್ರಾಮದ ಮುಂಡಾಡಿ ಜನತಾ ಕಾಲನಿಯ ಶಕುಂತಳಾ ಎಂಬವರ ಮನೆಯ ಗೋಡೆ ಕುಸಿತಗೊಂಡಿದೆ.ವೇಣೂರು ಗ್ರಾಮದ ಮೈಮುನ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.ಸೋಣಂದೂರು ಗ್ರಾಮದ ಸಬರಬೈಲು ಅಣ್ಣಿ ಮೂಲ್ಯರ ಶೌಚಾಲಯದ ಗೋಡೆ ಕುಸಿತಗೊಂಡಿದೆ.ಮಿತ್ತಬಾಗಿಲು ಗ್ರಾಮದ ಅಬೂಬಕ್ಕರ್ ಮನೆಯ ಮೇಲ್ಚಾವಣಿ ಗಾಳಿ ಮಳೆಗೆ ಕುಸಿದು ಬಿದ್ದು ಹಾನಿ ಉಂಟಾಗಿದೆ.ಅದಲ್ಲದೇ ಭಾರೀ ಮಳೆಯಿಂದ ನೇತ್ರಾವತಿ ಸೇರಿದಂತೆ ತಾಲೂಕಿನಲ್ಲಿ ಹರಿಯುವ ವಿವಿಧ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.‌ ಕಳೆದ ಕೆಲವು ವರ್ಷಗಳ ಹಿಂದೆ ತಾಲೂಕಿನಲ್ಲಿ ಭಾರೀ ಮಳೆಗೆ ಭೂಕುಸಿತ ಉಂಟಾಗಿ ನೆರೆಯಿಂದಾಗಿ ದೊಡ್ಡ ಅನಾಹುತ ಸಂಭವಿಸಿತ್ತು. ಚಾರ್ಮಾಡಿ ಘಾಟ್ ಪ್ರದೇಶ ಸೇರಿದಂತೆ ವಿವಿಧೆಡೆ ಸತತವಾಗಿ ಭಾರೀ ಮಳೆಯಾಗುತಿದ್ದು  ಒಂದು ವೇಳೆ ರಾತ್ರಿಯೂ ಮಳೆ ಜೋರಾದರೆ ನೆರೆ ಆಥವಾ ಭೂಕುಸಿತದ ಭಯದ ಆತಂಕ ಜನರಲ್ಲಿ ಮೂಡಿದೆ.

error: Content is protected !!