ಭಾರೀ ಮಳೆ:ತಾಲೂಕಿನ ಹಲವೆಡೆ ಮನೆಗಳಿಗೆ ಹಾನಿ: ಗೋವಿಂದೂರು ಬಳಿ ರಸ್ತೆಗೆ ಬಿದ್ದ ಮರ:ಅರ್ಧ ತಾಸು ರಸ್ತೆ ತಡೆ,ಸ್ಥಳೀಯರಿಂದ ತೆರವು:

 

 

 

ಬೆಳ್ತಂಗಡಿ: ಕಳೆದ ಒಂದು ವಾರಗಳಿಂದ ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತಿದೆ.ಬೆಳ್ತಂಗಡಿ ತಾಲೂಕಿನಲ್ಲಿಯೂ ವಿಪರೀತ ಮಳೆಯಾಗುತಿದ್ದು ವಿವಿಧೆಡೆ ಗುಡ್ಡ ಕುಸಿತ ಮನೆಗಳಿಗೆ ಹಾನಿ ಸಂಭವಿಸಿದೆ. ಬೆಳ್ತಂಗಡಿ ಉಪ್ಪಿನಂಗಡಿ ರಸ್ತೆಯ ಗೋವಿಂದೂರು ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಅರ್ಧ ತಾಸಿಗೂ ಹೆಚ್ಚು ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಕ್ಷಣ ಸ್ಥಳೀಯರು ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ನಾವೂರು ಗ್ರಾಮದ ಕಿರ್ನಡ್ಕ ಎಂಬಲ್ಲಿ ಅಬೂಬಕ್ಕರ್ ಎಂಬವರ ಮನೆ ಬದಿ ಮಣ್ಣು ಕುಸಿದು ಬಿದ್ದಿದೆ.ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ಇಸ್ಮಾಯಿಲ್ ಅವರ ಮನೆ ಹಿಂಬಾಗದ ತಡೆಗೋಡೆ ಕುಸಿದು ಬಿದ್ದಿದೆ. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ.ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಕಳೆದ ಮೂರು ದಿನಗಳಿಂದ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.

error: Content is protected !!