75 ನೇ ವರ್ಷಕ್ಕೆ  ಕಾಲಿಡುತ್ತಿರುವ ಸೋಣಂದೂರು ಶಾಲೆಯಲ್ಲಿ  ಶಿಕ್ಷಕರ ಜಗಳ: ಬೇಸತ್ತು ಮಕ್ಕಳನ್ನು  ಬೇರೆ ಶಾಲೆಗೆ ಸೇರಿಸಿದ ಪೋಷಕರು: ಇಬ್ಬರು ಶಿಕ್ಷಕಿಯರ ವರ್ಗಾವಣೆ :ಹೊಸ ಶಿಕ್ಷಕಿಯರ ನೇಮಕ: ಬಗೆಹರಿದ ಸಮಸ್ಯೆ, ನಾಳೆಯಿಂದ  ಮತ್ತೆ ಶಾಲೆಯತ್ತ ವಿದ್ಯಾರ್ಥಿಗಳು,:ಬಿಇಒ ಸ್ಪಷ್ಟನೆ..!

 

 

 

 

ಬೆಳ್ತಂಗಡಿ:ಶಿಕ್ಷಕರ ಜಗಳದಿಂದ ಬೇಸತ್ತ ವಿದ್ಯಾರ್ಥಿಗಳ ಪೋಷಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ವಿದ್ಯಾರ್ಥಿಗಳಿಲ್ಲದೆ ಶಾಲೆಯೇ ಖಾಲಿಯಾದ ವಿದ್ಯಮಾನ ಬೆಳ್ತಂಗಡಿ ತಾಲೂಕು ಸೋಣಂದೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಸುಮಾರು 75 ವರ್ಷದ ಇತಿಹಾಸ ಇರುವ ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಸೋಣಂದೂರು ದ.ಕ. ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ 1ರಿಂದ 7ನೇ ತರಗತಿ ತನಕ 37 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಶಾಲೆಯ ಮೂವರು ಶಿಕ್ಷಕಿಯರು ವಿದ್ಯಾರ್ಥಿಗಳ ಎದುರೇ ಬಹಿರಂಗವಾಗಿ ಆಗಾಗ ಜಗಳವಾಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ಶಿಕ್ಷಕಿಯರ ಜಗಳದಿಂದ ಬೇಸತ್ತು ಪೋಷಕರು ತಮ್ಮ ಮಕ್ಕಳನ್ನು ಅಕ್ಕಪಕ್ಕದ  ಶಾಲೆಗಳಿಗೆ ಸೇರಿಸಿದ್ದಾರೆ.

ಶಾಲೆಯನ್ನು ಒಂದು ವರ್ಷದಿಂದ ದತ್ತು ಪಡೆದಿರುವ ಮಂಗಳೂರಿನ ಅರವಿಂದ್‌ ವಿವೇಕ್‌ ಪೌಂಡೇಶನ್‌ ಶಾಲೆಯ ಅಭಿವೃದ್ಧಿ ಕಡೆ ಗಮನ ಹರಿಸಿತ್ತು. ಪೌಂಡೇಶನ್‌ನಿಂದ ಶಾಲೆಗೆ ಇಬ್ಬರು ಶಿಕ್ಷಕಿಯರನ್ನು ನೀಡಲಾಗಿತ್ತು. ಈ ಶಿಕ್ಷಕಿಯರ ಜೊತೆಗೂ ಶಾಲೆಯ ಮೂವರು ಶಿಕ್ಷಕಿಯರು ಜಗಳ ನಡೆಸುತ್ತಿದ್ದರು ಎನ್ನಲಾಗಿದೆ. ಈಗ ಮಕ್ಕಳಿಲ್ಲದೆ ಶಾಲೆ ಭಣಗುಡುತ್ತಿದ್ದು, ತರಗತಿಗಳೆಲ್ಲವೂ ಸಂಪೂರ್ಣ ಖಾಲಿ ಖಾಲಿಯಾಗಿವೆ.ಜು 04 ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿದರಲ್ಲದೇ ಈ ಶಾಲೆಯ ಇಬ್ಬರು ಶಿಕ್ಷಕಿಯರನ್ನು ಬೇರೆ ಶಾಲೆಗೆ ಬೇರೆ ಇಬ್ಬರು ಶಿಕ್ಷಕಿಯರನ್ನು ಈ ಶಾಲೆಗೆ ವರ್ಗಾವಣೆಗೊಳಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ  ನೀಡಿದ ಬಿಇಒ ವಿರೂಪಕ್ಷಪ್ಪ ಅವರು ಕಳೆದ ಕೆಲವು ಸಮಯಗಳಿಂದ ಈ ಶಾಲೆಯ   ಶಿಕ್ಷಕಿಯರ ಸಮಸ್ಯೆಯಿಂದಾಗಿ ಮಕ್ಕಳಿಗೆ ತೊಂದರೆಯಾಗಿದ್ದು ಬೇಸರದಲ್ಲಿ  ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ. ಈ ಬಗ್ಗೆ ತಕ್ಷಣ ಶಾಲೆಗೆ ಭೇಟಿ ನೀಡಿ ಕಾರ್ಯನಿರ್ವಹಿಸುತಿದ್ದ ಇಬ್ಬರು ಶಿಕ್ಷಕಿಯರನ್ನು ಎಚ್ಚರಿಕೆ ನೀಡಿ ಬೇರೆಡೆ ವರ್ಗಾಯಿಸಿ ಇಲ್ಲಿಗೆ ಹೊಸ ಶಿಕ್ಷಕರ ನೇಮಕ ಮಾಡಿ  ಸಮಸ್ಯೆ ಬಗೆಹರಿಸಲಾಗಿದೆ  ಜುಲೈ 05  ರಿಂದ ಮಕ್ಕಳೆಲ್ಲರೂ ಮರಳಿ ಶಾಲೆಗೆ ಬರಲಿದ್ದಾರೆ ಎಂದರು. ಹಳೇ ವಿದ್ಯಾರ್ಥಿ ಸಂಧ್ಯಾ ಶೆಟ್ಟಿ ಮಾತನಾಡಿ ಶಿಕ್ಷಕರ ಸ್ವ ಪ್ರತಿಷ್ಠೆಯ ಕಾರಣಕ್ಕಾಗಿ ಈ ವಿದ್ಯಾ ದೇಗುಲ ಮಕ್ಕಳಿಲ್ಲದೇ ಬಡವಾಗಿದೆ. ತುಂಬ ನೋವಾಗ್ತ ಇದೆ. ಮುಂದಿನ ವರ್ಷ 75 ನೇ ವರ್ಷದ ಸಂಭ್ರಮದಲ್ಲಿ ಇರುವ ಈ ಶಾಲೆಯಲ್ಲಿ ಕಲಿತ  ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಇದ್ದಾರೆ. ಅದರೆ ಶಿಕ್ಷಕರ ಜಗಳದಿಂದ ಶಾಲೆಗೆ ಮಕ್ಕಳು ಬಾರದ ಸ್ಥಿತಿ ಈಗ ನಿರ್ಮಾಣವಾಗಿದೆ. ಪೋಷಕರು ಶಿಕ್ಷಕರಲ್ಲಿ ಈ ಬಗ್ಗೆ ವಿಚಾರಿಸಿದರೆ ನಾವು ಸರ್ಕಾರಿ ನೌಕರರು ನಿಮ್ಮ ಸಲಹೆ ನಮಗೆ ಬೇಕಿಲ್ಲ ಎನ್ನುವುದಲ್ಲದೇ ಮಕ್ಕಳನ್ನು ಟಾರ್ಗೆಟ್ ಮಾಡಿ ಬೈಯುವಂತದ್ದು ಮಾಡಿದ್ದಾರೆ. ಈ ಕಾರಣದಿಂದಲೇ ಎಲ್ಲಾ ಮಕ್ಕಳನ್ನು ಇಲ್ಲಿಂದ ಬೇರೆ  ಶಾಲೆಗೆ ಸೇರಿಸಿದ್ದಾರೆ.ಇದೀಗ ಬಿಇಒ ಆಗಮಿಸಿ ಶಿಕ್ಷಕರನ್ನು ವರ್ಗಾವಣೆ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಈಗಾಗಲೇ ಮಕ್ಕಳ ಪೋಷಕರ ಮನವೊಲಿಸಿದ್ದೇವೆ ನಾಳೆಯಿಂದ ಎಲ್ಲ ಮಕ್ಕಳು ಎಂದಿನಂತೆ ಈ ಶಾಲೆಗೆ ಆಗಮಿಸಲಿದ್ದಾರೆ ಎಂದರು.

error: Content is protected !!