ಕೌಕ್ರಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ಬಲೆಗೆ: 20 ಸಾವಿರ ರೂ ಲಂಚ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ. ಪಿಡಿಒ:

 

 

 

ಬೆಳ್ತಂಗಡಿ: ಜಾಗದ ದಾಖಲೆ ಮಾಡಿಕೊಡಲು 20 ಸಾವಿರ ಲಂಚ ಬೇಡಿಕೆ ಇಟ್ಟ ಪಿಡಿಒ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದಿದ್ದಾರೆ.
ಕೊಕ್ಕಡದ ನಿವಾಸಿಯೊಬ್ಬರು ಕೌಕ್ರಾಡಿ ಗ್ರಾಮದಲ್ಲಿ ಜಾಗದ 9/11 ಖಾತೆ ಬದಲಾವಣೆ ಮಾಡಿಕೊಡಲು 2017 ರಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದು ಖಾತೆ ಬದಲಾವಣೆ ಆಗದೇ ಇದ್ದುದರಿಂದ 2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿದರೂ ಕೆಲಸ ಆಗದೇ ಇರುವುದರಿಂದ ಕಳೆದ ಎರಡು ದಿನಗಳ ಹಿಂದೆ ಅಂದರೆ ಜೂನ್ 20 ರಂದು ವಿಚಾರಿಸಲು ಮತ್ತೆ ಪಂಚಾಯಿತಿಗೆ ಹೋದಾಗ ಅಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಮಹೇಶ್ ಜಿ.ಎನ್ ಅವರು 20 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು.ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರಂತೆ ಜೂ 22 ರಂದು 20 ಸಾವಿರ ಲಂಚ ಪಡೆಯುತ್ತಿರುವಾಗಲೇ ಪಿಡಿಒ ಅವರು ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದಿದ್ದಾರೆ. ಆರೋಪಿಯನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕರುಗಳಾದ ಶ್ರೀಮತಿ ಕಲಾವತಿ,ಚೆಲುವರಾಜು.ಬಿ.ಪೊಲೀಸ್ ನಿರೀಕ್ಷಕ ಅಮಾನುಲ್ಲ ಎ.ವಿನಾಯಕ ಬಿಲ್ಲವ,ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!