ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಎರಡನೇ ಅವಧಿಗೆ ಮೀಸಲಾತಿ: ಬೆಳ್ತಂಗಡಿಯಲ್ಲಿ ಜೂ 16 ರಂದು ಗ್ರಾ.ಪಂ ಸದಸ್ಯರ ಸಮ್ಮುಖದಲ್ಲಿ ನಿಗದಿ

ಬೆಳ್ತಂಗಡಿ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯತ್ ಚುನಾವಣೆ-2020ರ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಎರಡನೇ ಅವಧಿಗೆ ಮೀಸಲಾತಿಯನ್ನು ನಿಗದಿಪಡಿಸುವ ಪ್ರಕ್ರಿಯೆಯನ್ನು ಜೂ.16ರಂದು ನಿಗದಿಪಡಿಸಲಾಗಿದೆ.


ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ನಿಗಧಿಪಡಿಸಬೇಕಾಗಿರುವುದರಿಂದ ಬೆಳಗ್ಗೆ 10:30ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಪ್ರಕೃಯೆಯಲ್ಲಿ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳ ಚುನಾಯಿತರಾದ ಹಾಗೂ ತಮ್ಮ ತಾಲೂಕು ವ್ಯಾಪ್ತಿಯ ಅವಧಿ ಮುಕ್ತಾಯಗೊಳ್ಳಲಿರುವ ಗ್ರಾಮ ಪಂಚಾಯತಿಗಳ ಚುನಾಯಿತ ಅಧ್ಯಕ್ಷ ಉಪಾಧ್ಯಕ್ಷರುಗಳು ಭಾಗವಹಿಸಬೇಕಾಗಿ ಸೂಚಿಸಲಾಗಿದೆ.

error: Content is protected !!