ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಮತ್ತಷ್ಟು ಏರಿಕೆ: 2ನೇ ಸ್ಥಾನದಲ್ಲಿ ಕರ್ನಾಟಕ..!

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಲ್ಲಿ ಭಾರತ ಈ ಬಾರಿ ದಾಖಲೆಯ ಮಟ್ಟ ತಲುಪಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.22 ರಷ್ಟು ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದ್ದು ಅದರಲ್ಲೂ ಕರ್ನಾಟಕ 2ನೇ ಸ್ಥಾನದಲ್ಲಿದೆ.

ಏಪ್ರಿಲ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಶೇ.12 ರಷ್ಟು ಏರಿಕೆಯಾಗಿದ್ದು, 1.87 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಇದು ಈವರೆಗೆ ಸಂಗ್ರಹವಾದ ದಾಖಲೆಯ ಮೊತ್ತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಏಪ್ರಿಲ್ 2022ರಲ್ಲಿ ಜಿಎಸ್‌ಟಿ ಸಂಗ್ರಹ ಸುಮಾರು 1.68 ಲಕ್ಷ ಕೋಟಿ ರೂ. ಇತ್ತು. “ಏಪ್ರಿಲ್ 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,87,035 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 38,440 ಕೋಟಿ ರೂ., ಎಸ್‌ಜಿಎಸ್‌ಟಿ ರೂ. 47,412 ಕೋಟಿ, ಐಜಿಎಸ್‌ಟಿ ರೂ. 89,158 ಕೋಟಿ, ಸೆಸ್ 12,025 ಕೋಟಿ ಎಂದು ತಿಳಿಸಿದೆ.

ಇದೇ ಮೊದಲ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.75 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ. ಈ ಹಿಂದೆ 1.68 ಕೋಟಿ ಸಂಗ್ರಹವಾಗಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಶೇ. 16ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಒಟ್ಟು ಸಂಗ್ರಹ ರೂ 18.10 ಲಕ್ಷ ಕೋಟಿಗಳಷ್ಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 22 ರಷ್ಟು ಹೆಚ್ಚು ಎಂದಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಈ ಬಾರಿ 14,593 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. 33,196 ಕೋಟಿ ರೂ. ಜಿಎಸ್‌ಟಿ ಸಂಗ್ರಹದ ಮೂಲಕ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕೋವಿಡ್ ಸಾಂಕ್ರಾಮಿಕದ 2ನೇ ಅಲೆ ನಂತರ ಸುಧಾರಿತ ಆರ್ಥಿಕ ಚಟುವಟಿಕೆ ಮತ್ತು ಚೇತರಿಕೆ, ಇ-ಇನ್‌ವಾಯ್ಸಿಂಗ್, ಇ-ವೇ ಬಿಲ್‌ಗಳು, ಡೇಟಾ ಅನಾಲಿಟಿಕ್ಸ್ ಮತ್ತು ಆಡಿಟ್‌ಗಳಂತಹ ಹೆಚ್ಚಿದ ಅನುಸರಣೆ. ಆಟೋಮೊಬೈಲ್‌ಗಳು, ಬೆಲೆಬಾಳುವ ವಸ್ತುಗಳಿಗೆ ಹೆಚ್ಚಿದ ಬೇಡಿಕೆ. ಎಫ್‌ಎಂಸಿಜಿ, ಐಟಿ ಮತ್ತು ಇ-ಕಾಮರ್ಸ್ನಂತಹ ವಲಯಗಳಿಂದ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ.

error: Content is protected !!