ಗುರುವಾಯನಕೆರೆ ವಿದ್ಯಾರ್ಥಿನಿ ಅನುಮಾನಸ್ಪದವಾಗಿ ಬಿದ್ದು ಸಾವು: ಖಾಸಗಿ ಕಾಲೇಜಿನ ಹಾಸ್ಟೆಲಿನಲ್ಲಿ ನಡೆದ ಘಟನೆ:

 

 

 

ಬೆಳ್ತಂಗಡಿ : ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ಬರೆಯಲು ಕಾಲೇಜ್  ಹಾಸ್ಟೆಲ್ ನಲ್ಲಿದ್ದ  ವಿದ್ಯಾರ್ಥಿನಿಯೊಬ್ಬಳು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಏ.28 ರಂದು ಬೆಳಗ್ಗೆ  ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಖಾಸಗಿ   ಕಾಲೇಜೊಂದರಲ್ಲಿ ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ಮೇ.7 ರಂದು ನಡೆಯಲಿದ್ದು. ನವಂಬರ್ ತಿಂಗಳಲ್ಲಿ ಪೂರ್ವ ತಯಾರಿ ಮಾಡಲು ಕಾಲೇಜಿನ ಹಾಸ್ಟೆಲ್ ಗೆ ಬಂದಿದ್ದ ವಿದ್ಯಾರ್ಥಿನಿ ಉಮೆ ಉಜ್ಮಾ (19) ಏ. 28 ರಂದು ಬೆಳಗ್ಗೆ ಸುಮಾರು 5 ಗಂಟೆಗೆ ಹಾಸ್ಟೆಲ್ ನ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡಿದ್ದು ತಕ್ಷಣ ಆಡಳಿತ ಮಂಡಳಿ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಿಸದೆ ಬೆಳಗ್ಗೆ 9 ಗಂಟೆಗೆ ವಿದ್ಯಾರ್ಥಿನಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ವಿದ್ಯಾನಗರ ನಿವಾಸಿ ಸನಾವುಲ್ಲ ಮತ್ತು ಸೀಮಾ ಪಾರ್ವಿನ್ ದಂಪತಿಗಳ ಮಗಳಾದ ಉಮೆ ಉಜ್ಮಾ (19) ಸಾವನ್ನಪ್ಪಿದ ವಿದ್ಯಾರ್ಥಿನಿ.

ವಿದ್ಯಾರ್ಥಿನಿ ಪರೀಕ್ಷೆಯ ವಿಚಾರದಲ್ಲಿ ಭಯದಿಂದ  ಆತ್ಮಹತ್ಯೆ ಮಾಡಿಕೊಂಡಿದ್ದಾಳೋ  ಅಥವಾ ಕಟ್ಟಡದಿಂದ  ಜಾರಿ ಬಿದ್ದು  ಘಟನೆ ಸಂಭವಿಸಿದೆಯೋ ತನಿಖೆಯಿಂದ ತಿಳಿದು ಬರಬೇಕಾಗಿದೆ. ಈ ಬಗ್ಗೆ   ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ತಂದೆ ಸನಾವುಲ್ಲ ದೂರು ನೀಡಿದ್ದಾರೆ.

error: Content is protected !!