ಬೆಳ್ತಂಗಡಿ: ಬಿಜೆಪಿ ಅಭ್ಯರ್ಥಿ ನಾಮಪತ್ರಸಲ್ಲಿಕೆ ಕಾರ್ಯಕ್ರಮ ಏ.17ರಂದು ಭರ್ಜರಿಯಾಗಿದೆ ನಡೆದಿದೆ.
ಬೆಳಗ್ಗೆ ತಾಲೂಕಿನ ವಿವಿಧ ಭಾಗದ ಜನರು ಮಿನಿಬಸ್, ಪಿಕಪ್, ಕಾರು, ರಿಕ್ಷಾ, ಜೀಪ್, ದ್ವಿಚಕ್ರ ವಾಹನದಲ್ಲಿ ಬೆಳ್ತಂಗಡಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ ಬಂದಿದ್ದು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ಭಾಗಿಯಾದರು.
ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಸಹಸ್ರ ಕಾರ್ಯಕರ್ತರ ಭಾಗವಹಿಸುವಿಕೆಯಲ್ಲಿ ಆರಂಭವಾದ ಮೆರವಣಿಗೆ ರಾಜ ಮಾರ್ಗದಲ್ಲಿ ಸಾಗಿಬಂದು ತಾಲೂಕು ಆಡಳಿತ ಕಛೇರಿಯಲ್ಲಿ ತನ್ನ ಉಮೇದುದಾರಿಕೆಯನ್ನು ಸಲ್ಲಿಸಿದರು.
ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹರೀಶ್ ಪೂಂಜ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ನಾಯಕ್, ಸುಬ್ರಹ್ಮಣ್ಯ ಅಗರ್ತ, ಕುಶಾಲಪ್ಪ ಗೌಡ, ಜಯಂತ ಕೋಟ್ಯಾನ್, ನಂದ ಕುಮಾರ್, ಉಪಸ್ಥಿತರಿದ್ದರು.