ಬೆಳ್ತಂಗಡಿ :ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 8 ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ಹರೀಶ್ ಪೂಂಜಾ ಟಿಕೆಟ್ ಪಡೆದುಕೊಂಡಿದ್ದಾರೆ. ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್, ಮಂಗಳೂರು ಉತ್ತರ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ವೇದವ್ಯಾಸ ಕಾಮತ್, ಮೂಡಬಿದಿರೆ ಉಮಾನಾಥ ಕೋಟ್ಯಾನ್ , ಮಂಗಳೂರು ಕ್ಷೇತ್ರದಲ್ಲಿ ಸತೀಶ್ ಕುಂಪಲ, ಪುತ್ತೂರಿನಿಂದ ಆಶಾ ತಿಮ್ಮಪ್ಪ ಗೌಡ, ಸುಳ್ಯದಿಂದ ಭಾಗೀರಥಿ ಮುರುಳ್ಯ ಟಿಕೆಟ್ ಪಡೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಒಟ್ಟು 5 ಕ್ಷೇತ್ರದ ಅಭ್ಯರ್ಥಿಗಳ ಪೈಕಿ ಮೊದಲ ಪಟ್ಟಿಯಲ್ಲಿ 4 ಸ್ಥಾನ ದೊರಕಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಿರಣ್ ಕೊಡ್ಗಿ, ಕಾರ್ಕಳ ಸುನೀಲ್ ಕುಮಾರ್ , ಕಾಪು ಸುರೇಶ್ ಶೆಟ್ಟಿ ಗುರ್ಮೆ, ಉಡುಪಿಯಲ್ಲಿ ಯಶಪಾಲ್ ಸುವರ್ಣರಿಗೆ ಟಿಕೆಟ್ ಘೋಷಣೆಯಾಗಿದೆ.
ಇನ್ನುಳಿದಂತೆ ಶಿಗ್ಗಾವಿ ಬಸವರಾಜ ಬೊಮ್ಮಾಯಿ, ನರಗುಂದ – ಸಿಸಿ ಪಾಟೀಲ್, ಧಾರವಾಡ – ಅಮೃತ ದೇಸಾಯಿ, ಹಿರೇಕೇರೂರು – ಬಿ.ಸಿ ಪಾಟೀಲ್, ಬಳ್ಳಾರಿ ಗ್ರಾಮೀಣ ಶ್ರೀರಾಮುಲು, ಶಿರಸಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಧೋಳ – ಗೋವಿಂದ ಕಾರಜೋಳ, ಶಿಕಾರಿಪುರ – ಬಿ.ವೈ ವಿಜಯೇಂದ್ರ,ಪದ್ಮನಾಭನಗರ ಹಾಗೂ ಕನಕಪುರದಿಂದ ಆರ್.ಅಶೋಕ್ ಗೆ ಟಿಕೆಟ್ ಸಿಕ್ಕಿದೆ. ಕನಕಪುರದಲ್ಲಿ ಡಿಕೆಶಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಲುವಾಗಿ ಆರ್.ಅಶೋಕ್ ಈ ಬಾರಿ ಕನಕಪುರದಿಂದಲೂ ಸ್ಪರ್ಧೆ ಮಾಡಲಿದ್ದಾರೆ.
ಈ ಬಾರಿ ಬಿಜೆಪಿಯು 52 ಹೊಸ ಮುಖಗಳಿಗೆ ಅವಕಾಶ ನೀಡಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಿಂದುಳಿದ ರವರ್ಗ 32, ಎಸ್ಸಿ 30 ಹಾಗೂ ಎಸ್ಟಿ ಸಮುದಾಯದ 16 ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.