ಲಾಡ್ಜ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು: ಸಾವಿಗೆ ಕಾರಣ ತಿಳಿಸಿದ ಡೆತ್ ನೋಟ್:ಮಂಗಳೂರು ನಗರ ಪೊಲೀಸ್ ಆಯುಕ್ತರಿಂದ ಪರಿಶೀಲನೆ

ಮಂಗಳೂರು: ಲಾಡ್ಜ್ ಒಂದರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾ.31ರಂದು ನಡೆದಿದೆ.

ಕೆಎಸ್ ರಾವ್ ರಸ್ತೆಯ ಲಾಡ್ಜ್ ಒಂದರಲ್ಲಿ ಗಂಡ-ಹೆಂಡತಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ದೇವೇಂದ್ರ (48), ನಿರ್ಮಲಾ (48), ಚೈತ್ರಾ (09), ಚೈತನ್ಯ (09) ಎಂದು ಗುರುತಿಸಲಾಗಿದೆ.

ಮೈಸೂರಿನ ವಿಜಯನಗರ ಮೂಲದ ಕುಟುಂಬದವರಾಗಿದ್ದು ದೇವೇಂದ್ರ ಅವರು ಮೊದಲು ಹೆಂಡತಿ, ಮಕ್ಕಳಿಗೆ ವಿಷವುಣಿಸಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೇಲ್ನೊಟಕ್ಕೆ ಕಂಡು ಬಂದಿದೆ. ಮೃತದೇಹದ ಬಳಿ ಡೆತ್ ನೋಡ್ ಕೂಡ ಸಿಕ್ಕಿದ್ದು, ಸಾಲಬಾಧೆಯಿಂದ ಹಾಗೂ ಸಾಲಗಾರರ ಒತ್ತಡ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬರೆಯಲಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

error: Content is protected !!