ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ವೇಣೂರು: ಸಂಭ್ರಮದ ಕಾರ್ಯಕ್ರಮಕ್ಕೆ ಭಕ್ತಸಾಗರ: ಫೆ.24ರಂದು ಅಭೂತಪೂರ್ವ ಸರಣಿ ಕಾರ್ಯಕ್ರಮಗಳು

ವೇಣೂರು: ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ 5 ದಿನಗಳಿಂದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಭಕ್ತಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಇಂದು ಬೆಳಗ್ಗಿನಿಂದಲೇ ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಸಂಜೆ ಶ್ರೀಚಕ್ರಪೂಜೆ, ಭದ್ರಕಾಳಿ ಪರಿವಾರ ದೇವರ ಕಲಶಾಧಿವಾಸ, ಅಧಿವಾಸ ಹೋಮ, ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 7 ರಿಂದ ಮೀನುಗಾರಿಕಾ ಸಚಿವ ಎಸ್ ಅಂಗಾರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗು ಉಡುಪಿ ದ್ವಾರಕಾಮಯಿ ಶಂಕರ ಪುರ ಏಕಜಾತಿ ಧರ್ಮ ಪೀಠದ
ಶ್ರೀ ಶ್ರೀ ಸಾಯಿ ಈಶ್ವರ ಗುರೂಜಿ, ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಭರತ್ ಶೆಟ್ಟಿ, ಮಾಜಿ ಸಚಿವ ಬಿ.ರಮಾನಾಥ ರೈ. ಮಾಜಿ ಸಚಿವ ಗಂಗಾಧರ ಗೌಡ, ಅಳದಂಗಡಿ, ಅರಮನೆಯ ಶಿವಪ್ರಸಾದ ಅಜಿಲರು, ಬಂಟ್ವಾಳ ಬೊಳ್ಳೂರು ರಾಜ್ಯಗುತ್ತು ಕೃಷ್ಣಪ್ರಸಾದ್ ರೈ, ಶ್ರೀ ಸದಾಶಿವ ದೇವಸ್ಥಾನ ಕೂಡಬೆಟ್ಟು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಭಾಗವಹಿಸಲಿದ್ದಾರೆ.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿದ್ದು, ಮಧ್ಯಾಹ್ನ 1:30ರಿಂದ ಶಿವಾಂಜಲಿ ಡಾನ್ಸ್ ಕೇಂದ್ರ ವೇಣೂರಿನ ಸ್ಪೂರ್ತಿ ಭಟ್ ತಂಡದಿಂದ ಭರತನಾಟ್ಯ ಹಾಗೂ ಹಾಡುಗಳು ನೃತ್ಯ ಕಾರ್ಯಕ್ರಮ, ಸಂಜೆ 5ರಿಂದ ಅನೀಶ್ ಪೂಜಾರಿ ವೇಣೂರು ಇವರ ಝೀ ತಂಡದಿಂದ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಿಂದ ತೆಲಿಕೆದ ತಮ್ಮನ ಹಾಸ್ಯ ಹೊನಲು ಮೂಡಿಬರಲಿದೆ, ರಾತ್ರಿ 7 ರಿಂದ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಮುಗುರು ಮಲ್ಲಿಗೆ ತುಳು ಕಥಾನಕ , ರಾತ್ರಿ 9:30 ರಿಂದ ಕದ್ರಿ ನವನೀತ ಶೆಟ್ಟಿ ನಿದೇರ್ಶನದ ಬೊಳ್ಳಿ ಮಲೆತ್ತ ಶಿವ ಶಕ್ತಿಲು ಪೌರಾಣಿಕ ನಾಟಕ ಮೂಡಿಬರಲಿದೆ.

ಈ ಎಲ್ಲಾ ಕಾರ್ಯಕ್ರಮಗಳು ಪ್ರಜಾಪ್ರಕಾಶ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ನಿರಂತರ ನೇರಪ್ರಸಾರವಾಗಲಿದೆ.

error: Content is protected !!