ಚಾರ್ಮಾಡಿ ಘಾಟ್ ಮೂಲಕ ಕುಡುಮಪುರಕ್ಕೆ ಪಾದಯಾತ್ರಿಗಳ ಆಗಮನ: ಧರ್ಮಸ್ಥಳ ಪೊಲೀಸರಿಂದ ವಿಶೇಷ ಜಾಗೃತಿ ಅಭಿಯಾನ: ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ಉಚಿತ ಹಣ್ಣು, ಹಂಪಲು ಹಾಗೂ ಮಜ್ಜಿಗೆ

ಬೆಳ್ತಂಗಡಿ : ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಾವಿರಾರು ಜನರು ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಮೂಲಕ ಬರುತ್ತಿದ್ದಾರೆ. ಹೀಗಾಗಿ ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆಯವರು ಪಾದಯಾತ್ರಿಗಳಿಗೆ ಉಚಿತವಾಗಿ ಹಣ್ಣು ಹಂಪಲು ನೀಡುತ್ತಿದ್ದಾರೆ. ಈ ಭಾರಿ ವಿಶೇಷವಾಗಿ ಬೆಳ್ತಂಗಡಿ ಸಂಚಾರಿ ಪೊಲೀಸರು ಕೂಡ ಪಾದಯಾತ್ರಿಗಳ ಬಾಯಾರಿಕೆ, ಹಸಿವು ತಣಿಸಲು ಮುಂದಾಗಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಉಚಿತವಾಗಿ ಹಣ್ಣು, ಹಂಪಲು ಹಾಗೂ ಮಜ್ಜಿಗೆ ನೀಡುತ್ತಿದ್ದಾರೆ. ಕಲ್ಲಂಗಡಿ ಜ್ಯೂಸ್ ಮತ್ತು ಮಜ್ಜಿಗೆಗಳನ್ನು ತಯಾರಿ ಮಾಡಿಕೊಂಡು ಪಿಕಪ್ ಮೂಲಕ ತಂದು ರಸ್ತೆಯ ಪಕ್ಕದಲ್ಲಿ ಟೇಪಲ್ ಹಾಕಿ ಭಕ್ತರಿಗೆ ನೀಡುವ ಮೂಲಕ ಸೇವೆ ಮಾಡುತ್ತಿದ್ದು, ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ಮತ್ತು ಸಿಬ್ಬಂದಿಗಳು ಚಾರ್ಮಾಡಿ ಘಾಟ್‌ನಿಂದ ಧರ್ಮಸ್ಥಳದವರೆಗೂ ಪಾದಯಾತ್ರಿಗಳಲ್ಲಿ ವಿಶೇಷ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಪಾದಯಾತ್ರಿಗಳಿಗೆ ಚಿನ್ನಾಭರಣ, ಹಣ ಇವುಗಳ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಪರಿಚಯವಿಲ್ಲದ ಅಪರಿಚಿತ ವ್ಯಕ್ತಿಗಳು ಬ್ಯಾಗ್ ಹಿಡಿದುಕೊಳ್ಳುವ ಸಹಾಯದ ನೆಪದಲ್ಲಿ ಕಳ್ಳತನ ಮಾಡುವಂತಹ ಕೃತ್ಯ ನಡೆಯುತ್ತದೆ, ರಸ್ತೆಯಲ್ಲಿ ಹೋಗುವಾಗ ವಾಹನಗಳ ಬಗ್ಗೆ ಗಮನಹರಿಸಿ, ನಿಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಿ, ರಾತ್ರಿ ಮಲಗುವಾಗ ನಿಮ್ಮ ವಸ್ತುಗಳ ಬಗ್ಗೆ ನಿಗಾವಹಿಸಿಕೊಂಡು ನಿದ್ರಿಸಬೇಕು ಎಂದು ತಿಳಿಸಿದ್ದಾರೆ.

error: Content is protected !!