ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ಮಾಲೀಕರ ಸಭೆ: ಜುಗಾರಿ ಸೇರಿದಂತೆ,ಅನೈತಿಕ ವ್ಯವಹಾರ ಕಂಡು ಬಂದಲ್ಲಿ ಕಠಿಣ ಕ್ರಮದ ಎಚ್ಚರಿಕೆ:

 

 

ಬೆಳ್ತಂಗಡಿ: ಉಜಿರೆ ಸೇರಿದಂತೆ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಲಾಡ್ಜ್ ಗಳಲ್ಲಿ ಅನೈತಿಕ ವ್ಯವಹಾರ ಹಾಗೂ ಜುಗಾರಿ ಆಟದ ಬಗ್ಗೆ ಪೊಲೀಸರಿಗೆ  ಮಾಹಿತಿ  ಲಭಿಸಿದ್ದು , ಫೆ 06 ರ ರಾತ್ರಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಬಂಟ್ವಾಳ ಡಿ ವೈ ಎಸ್ ಪಿ ನೇತೃತ್ವದ ವಿಶೇಷ ತಂಡ ಉಜಿರೆಯ ಲಾಡ್ಜ್ ಗಳಿಗೆ ದಾಳಿ ನಡೆಸಿತ್ತು.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಫೆ 07 ರಂದು ಲಾಡ್ಜ್ ಮಾಲೀಕರ ಸಭೆ ನಡೆಯಿತು. ಯಾವುದೇ ಲಾಡ್ಜ್ ಗಳಲ್ಲಿ ಅನೈತಿಕ ವ್ಯವಹಾರ ಮಾಡದಂತೆ, ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ವ್ಯವಹಾರ ನಡೆಸಬೇಕು.
ಯಾವುದೇ ಕಾರಣಕ್ಕೂ ಅಕ್ರಮ ಚಟುವಟಿಕೆ ನಡೆಯಬಾರದು ಕೆಲವು
ಲಾಡ್ಜ್ ಗಳಲ್ಲಿ ಜುಗಾರಿ ಆಡುವ ಬಗ್ಗೆ ಕೂಡ ಮಾಹಿತಿ ಸಿಕ್ಕಿದ್ದು ಒಂದು ವೇಳೆ ಇಂತಹ ವ್ಯವಹಾರಗಳು ಕಂಡು ಬಂದಲ್ಲಿ ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾ ಪಿಐ ಸತ್ಯನಾರಾಯಣ. ಕೆ. ಎಚ್ಚರಿಕೆ ನೀಡಿದರು.
ಅದೇ ರೀತಿ ಇನ್ನು ಮುಂದಕ್ಕೆ ವಿದಾನಸಭೆ ಚುನಾವಣೆ ಇರುವುದರಿಂದ ಲಾಡ್ಜ್ ಗಳಲ್ಲಿ ತಂಗುವವರ ಸರಿಯಾದ ವಿವರಗಳನ್ನು ಪಡೆದುಕೊಳ್ಳುವುದು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಲಾಡ್ಜ್ ಗಳಲ್ಲಿ ತಂಗಲು ಬಂದರೆ ಅಂತವರ ಮಾಹಿತಿಯನ್ನು ಕೂಡಲೇ ಪೊಲೀಸರಿಗೆ ನೀಡಬೇಕು ಎಂದರು.
ಸಭೆಯಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್.ಬಿ. ಹಾಗೂ ಬೆಳ್ತಂಗಡಿ ಠಾಣಾ ಪಿಎಸ್ಐ ಅರ್ಜುನ್.ಹೆಚ್.ಕೆ. ಉಪಸ್ಥಿತರಿದ್ದರು.

error: Content is protected !!