ಡಿ 25 ಕಳೆಂಜ ನಂದಗೋಕುಲ ಗೋಶಾಲಾ ದೀಪೋತ್ಸವ: ತಾಲೂಕಿನಿಂದ ಗೋಗ್ರಾಸ ಹೊರೆಕಾಣಿಕೆ ಶೋಭಾಯಾತ್ರೆಗೆ ,ಶಾಸಕ ಹರೀಶ್ ಪೂಂಜ ಚಾಲನೆ: ಗೋಗ್ರಾಸ ಹೊತ್ತು ಗೋಶಾಲೆಗೆ ಸಾಗಿದ ನೂರಾರು ವಾಹನಗಳು:

 

ಬೆಳ್ತಂಗಡಿ: ನಂದಗೋಕುಲ ಗೋಶಾಲೆ ಕಳೆಂಜ ಇಲ್ಲಿ ಡಿ 25 ರಂದು ನಡೆಯುವ ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ತಾಲೂಕಿನ ವಿವಿಧ ಗ್ರಾಮಗಳಿಂದ ಗೋಗ್ರಾಸ ಹೊರೆಕಾಣಿಕೆ ಮೆರವಣಿಗೆಯ ಶೋಭಾಯಾತ್ರೆ ನಡೆಯಿತು. ವಾಣಿ ಶಾಲಾ ಅವರಣದಲ್ಲಿ ಶೋಭಾಯಾತ್ರೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.

 

 

ಈ ಸಂದರ್ಭದಲ್ಲಿ ಬೆಳ್ತಂಗಡಿ ಪ.ಪಂ ಅಧ್ಯಕ್ಷೆ ರಜನಿ ಕುಡ್ವ,  ಪೂರನ್ ವರ್ಮ, ಭಾಸ್ಕರ್ ಧರ್ಮಸ್ಥಳ,ದಯಾಕರ್ ಎಂ. ಸುಬ್ರಹ್ಮಣ್ಯ ಅಗರ್ತ, ಸೀತರಾಮ್ ಬೆಳಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

 

ಲಾಯಿಲ, ಉಜಿರೆ, ಧರ್ಮಸ್ಥಳ, ನಿಡ್ಲೆ, ಹಾಗೂ ತಾಲೂಕಿನ ಇನ್ನಿತರ ಗ್ರಾಮಗಳಿಂದ ಬೈಹುಲ್ಲು, ಹಿಂಡಿ, ಸೇರಿದಂತೆ ಇನ್ನಿತರ ವಸ್ತುಗಳನ್ನು ಹೊತ್ತ ನೂರಾರು ವಾಹನಗಳು ಮೆರವಣಿಗೆಯ ಮೂಲಕ  ನಂದಗೋಕುಲ ಗೋಶಾಲೆಗೆ  ಸಂಜೆ ತಲುಪಲಿವೆ.

error: Content is protected !!