ಶೈಕ್ಷಣಿಕ ಗುಣಮಟ್ಟದ ಮೂಲಕ ಮಾದರಿ ವಿದ್ಯಾ ಸಂಸ್ಥೆ : ವಾಣಿ ಶಿಕ್ಷಣ ಸಂಸ್ಥೆಯಲ್ಲಿ ರಂಗೇರಿದ ರಂಗು ರಂಗಿತ ಸಾಂಸ್ಕೃತಿಕ ಉತ್ಸವ: ಅದ್ದೂರಿ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ

ಬೆಳ್ತಂಗಡಿ: ಗ್ರಾಮೀಣ ಪ್ರದೇಶದಲ್ಲಿ ಒಂದು ಶಿಕ್ಷಣ ಸಂಸ್ಥೆ ತನ್ನ ಶೈಕ್ಷಣಿಕ ಗುಣಮಟ್ಟವನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದಕ್ಕೆ ವಾಣಿ‌ವಿದ್ಯಾಸಂಸ್ಥೆ ಮಾದರಿಯಾಗಿದೆ.
ಅನೇಕ‌ ಹಿರಿಯರು ಈ ಸಂಸ್ಥೆಯನ್ನು ಒಳ್ಳೆ ಸಂಸ್ಥೆಯಾನ್ನಾಗಿ ರೂಪಿಸಿ, ಗುಣ ಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು . ಅವರು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ರಂಗು ರಂಗಿತ ವಾಣಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೊರೋನದಿಂದ ಕಳೆದ ,2 ವರ್ಷ ಕಾಲೇಜು‌ ವಾರ್ಷಿಕೋತ್ಸವ ಮಾಡಲಾಗದೆ ಹೋದರೂ ಈ ಬಾರಿ ರಂಗು ರಂಗಿತ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ , ಪೋಷಕರಿಗೆ ಊರಿನವರಿಗೆ ರಂಗಿನ ರಸದೌತಣ ನೀಡುತ್ತಿರುವುದು ಶ್ಲಾಘನೀಯ
ಕೊರೋನಾ ಕಾಲಘಟ್ಟದಲ್ಲೂ ಹೆದರದೇ ಸಂಸ್ಥೆಯನ್ನು ಮುನ್ನಡೆಸಿ, ಅನೇಕ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿ ವಾಣಿ ವಿದ್ಯಾ ಸಂಸ್ಥೆಯನ್ನು ಸದೃಡವಾಗಿ ರೂಪಿಸಿದ್ದಾರೆ ಎಂದು ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ರೇಷ್ಮೆರೋಡ್ ಎಂಬಲ್ಲಿ ಸುಮಾರು 15 ಎಕರೆ ಜಾಗದಲ್ಲಿ ವಿಶ್ವೇಶ್ವರಯ್ಯ ವಿಶ್ವ ವಿದ್ಯಾನಿಲಯದಡಿಯಲ್ಲಿ ಮೆರೀನ್ ಡಿಪ್ಲೊಮಾ ಕಾಲೇಜ್ ಸ್ಥಾಪನೆಯಾಗಲಿದ್ದು ಕೆಲವೇ ಸಮಯಗಳಲ್ಲಿ ಕಾಲೇಜ್ ಪ್ರಾರಂಭವಾಗಲಿದೆ ಎಂದರು.‌

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಾಂಶುಪಾಲರಾದ ಯದುಪತಿ ಗೌಡ ಇವರನ್ನು ಹಳೇ ವಿದ್ಯಾರ್ಥಿಗಳ ಹಾಗೂ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೋಹನ್ ಗೌಡ ಇಡ್ಯಡ್ಕ, ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಪದ್ಮಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ, ಪಟ್ಟಣ .ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಜಯಾನಂದ ಟಿ, ಹರೀಶ್ ಕಾರಿಂಜ, ನಿತ್ಯಾನಂದ ಬಿ, ಕುಮಾರಿ ಚಿನ್ಮಯಿ ವಿ.ಭಟ್, ಸತೀಶ್ ರೈ ಬಾರ್ದಡ್ಕ, ಸುರೇಶ್ ಶೆಟ್ಟಿ ಕುರೆಲ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಶ್ ಪ್ರಾಂಶುಪಾಲರಾದ ಯದುಪತಿ ಗೌಡ ಸ್ವಾಗತಿಸಿ, ವಾಣಿ ಆಂಗ್ಲ ಮಾದ್ಯಮ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರು ವಂದಿಸಿದರು. ಉಪನ್ಯಾಸಕಿ ಅನುರಾಧ ಕೆ.ರಾವ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!