ಬ್ಯಾನರ್ ಅಳವಡಿಸುವಾಗ ವಿದ್ಯುತ್ ಶಾಕ್: ಓರ್ವ ಸ್ಥಳದಲ್ಲೇ ಸಾವು, ಮತ್ತೊರ್ವನ ಸ್ಥಿತಿ ಗಂಭೀರ: ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ಘಟನೆ..!

ಬೆಳ್ತಂಗಡಿ: ಪ್ಲೇಕ್ಸ್ ಅಳವಡಿಕೆ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಒಬ್ಬರು ಮೃತಪಟ್ಟು ಇನ್ನೊಬ್ಬರು ಗಂಭೀರ ಸ್ಥಿತಿಯಲ್ಲಿರುವ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣದ ಶ್ರೀ ಗೋಕರ್ಣನಾಥ ಕೋ ಓಪರೇಟೀವ್ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ.

ಘಟನೆಯಲ್ಲಿ ಬೆಳ್ತಂಗಡಿ ಸಂಜಯನಗರ ನಿವಾಸಿ ಗೂಡ್ಸ್ ವಾಹನ ಚಾಲಕ ಪ್ರಶಾಂತ್ (39) ಸಾವನ್ನಪ್ಪಿದ್ದಾರೆ. ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಸಂಜೀವ ಅಚಾರ್ಯ ಅವರ ಮಗನಾದ ಸತೀಶ್(25)ರವರ ಸ್ಥಿತಿ ಗಂಭೀರವಾಗಿದೆ.

ಭಾರತೀಯ ಮಜ್ದೂರು ಸಂಘ ದ.ಕ ಮತ್ತು ಉಡುಪಿ ಜಿಲ್ಲೆ ವತಿಯಿಂದ ನ.13ರಂದು ಮಂಗಳೂರಿನಲ್ಲಿ ನಡೆಯಲಿರುವ ಕುಟುಂಬ ಮಿಲನ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪ್ರಶಾಂತ್ ಹಾಗೂ ಸತೀಶ್ ಬ್ಯಾನರ್ ಅಳವಡಿಸುತ್ತಿದ್ದರು. ಈ ವೇಳೆ ಬ್ಯಾನರ್ ನ ಕಬ್ಬಿಣದ ರಾಡ್ ವಿದ್ಯುತ್ ಲೈನ್ ನ ತಂತಿಗೆ ತಾಗಿದೆ. ತಕ್ಷಣವೇ ಕಬ್ಬಿಣದ ರಾಡ್ ನಲ್ಲಿ ವಿದ್ಯುತ್ ಹರಿದು, ಇಬ್ಬರಿಗೂ ಶಾಕ್ ಆಗಿದ್ದು, ಇಬ್ಬರೂ ನೆಲಕ್ಕೆ ಎಸೆಯಲ್ಪಟ್ಟಿದ್ದಾರೆ.


ಚಿಕಿತ್ಸೆಗಾಗಿ ಗಾಯಾಳುಗಳನ್ನು ಸ್ಥಳೀಯರು ತಕ್ಷಣವೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ರೂ ಓರ್ವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು ಇನ್ನೊರ್ವನ ಸ್ಥಿತಿ ಗಂಭೀರವಾಗಿದೆ.
ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!