ಬೆಳ್ತಂಗಡಿ: ವಾಹನಗಳಿಗೆ ರೆಟ್ರೋ ರಿಪ್ಲೆಕ್ಟಿವ್ ಟೇಪ್ & ರೆಯರ್ ಮಾರ್ಕಿಂಗ್ ಪ್ಲೆಟ್ ಹಾಕುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿಯಲ್ಲಿ ಇಂದು ವಾಹನ ಮಾಲಕರು ಪ್ರತಿಭಟನೆ ನಡೆಸಿದ್ದಾರೆ. ಲಾರಿ ಬಸ್ಸ್ ಸೇರಿದಂತೆ ಘನ ಹಾಗೂ ಲಘು ವಾಹನಗಳನ್ನು ಫಿಟ್ನೆಸ್ ಸರ್ಟಿಫಿಕೇಟ್ (ಎಫ್ ಸಿ) ಮಾಡಲು ಮಾಲಕರು ಬೆಳ್ತಂಗಡಿ ಎಪಿಎಂಸಿ ಪ್ರಾಂಗಣಕ್ಕೆ ತಂದಾಗ ಸಾರಿಗೆ ಪ್ರಾಧಿಕಾರ ನಿಗದಿ ಪಡಿಸಿದ ಸಂಸ್ಥೆಯವರು ನಮ್ಮ ಕ್ಯೂ ಆರ್ ಕೋಡ್ ಹೊಂದಿರುವ ರಿಪ್ಲೆಕ್ಟರ್ ಸ್ಟಿಕರ್ ಅಳವಡಿಸಿದ ನಂತರ ಎಫ್ ಸಿ ಮಾಡುವ ಬಗ್ಗೆ ತಿಳಿಸಿದ್ದು , ಈ ಸ್ಟಿಕರ್ ದರ 1 ಮೀಟರ್‌ಗೆ 160 ರೂಪಾಯಿ ಆಗಿದ್ದು . ಒಂದು ಪಿಕಪ್ ವಾಹನದ ಸ್ಟಿಕರ್ ಗೆ ಸುಮಾರು 1400 ಲಾರಿಗಳಿಗೆ ಅಂದಾಜು 5 ಸಾವಿರ ರೂಪಾಯಿ ನೀಡಬೇಕು ಎಂದಿದ್ದಾರೆ. ಇದರಿಂದ ಆಕ್ರೋಶಗೊಂಡ ವಾಹನ ಮಾಲಕರು ಸ್ಥಳದಲ್ಲಿ ಪ್ರತಿಭಟಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿದರಲ್ಲದೇ ಗೊಂದಲ ಸರಿ ಪಡಿಸುವಂತೆ ಅದಲ್ಲದೇ ಎಲ್ಲಾ ಕಡೆಗಳಲ್ಲಿ ಅನುಷ್ಠಾನ ಆಗುವವರೆಗೆ ಹಳೆಯ ರೀತಿಯಲ್ಲಿ ಮುಂದುವರಿಯುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಂದಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.