ತಾಲೂಕು ಪರಿಶಿಷ್ಟ ವರ್ಗದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ‌ ಮಹಾಸಭೆ

 

ಉಜಿರೆ: ತಾಲೂಕು ಪರಿಶಿಷ್ಟ ವರ್ಗದ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಇದರ ವಾರ್ಷಿಕ‌ ಮಹಾಸಭೆ ಉಜಿರೆ ಕಲ್ಮಂಜ ಮರಾಠಿ‌ ಸಮಾಜ ಸೇವಾ ಭವನ ಸಭಾಂಗಣದಲ್ಲಿ‌ ನಡೆಯಿತು.
ಸಂಘದ ಅಧ್ಯಕ್ಷ ಲಿಂಗಪ್ಪ ನಾಯ್ಕ್ ಮಾತನಾಡಿ, ಸಂಘದ ಕೇಂದ್ರ ಕಛೇರಿಗೆ 1 ಕೋಟಿ ರೂ. ಅನುದಾನದ ಗೋದಾಮು ಹಾಗೂ ಬ್ಯಾಂಕ್ ಕಛೇರಿಗೆ ಶಾಸಕರು ಅನುದಾ‌ನ‌ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಅಭಿವೃದ್ಧಿ ‌ಬಗ್ಗೆ ಚರ್ಚಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.

 

ಕಾರ್ಯಕ್ರಮದಲ್ಲಿ, ಅಸ್ಸಾಂನಲ್ಲಿ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು‌ನಾಯ್ಕ ಹಾಗೂ‌ ಕಲ್ಯಾಣಿಯವರ ಪುತ್ರ ಮಂಜುನಾಥ ನಾಯ್ಕ ಮದ್ದಡ್ಕ ಇವರ ಸೇವೆ ಗುರುತಿಸಿ , ಕರ್ಮಯೋಗಿ‌ ಪುರಸ್ಕಾರ ನೀಡಲಾಗುತ್ತಿದೆ.‌ ಮಂಜುನಾಥ ನಾಯ್ಕ್ ಅನುಪಸ್ಥಿತಿಯಲ್ಲಿ ಅವರ ಪತ್ನಿ, ‌ಮಕ್ಕಳಾದ ಮನ್ವಿತ್ , ಮನೀಷ್ ಹಾಗೂ ತಾಯಿ ಕಲ್ಯಾಣಿ ಅವರಿಗೆ ಪುರಸ್ಕಾರ ನೀಡಿ‌ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ಹಾಗೂ ‌ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಿಂಚನಾ , ಶರತ್, ಯಶಸ್ವಿನಿ, ರಚನಾ, ಹರ್ಷಿತ ಇವರನ್ನು ಸನ್ಮಾನ‌ಪತ್ರ ಹಾಗೂ‌ ಪ್ರೋತ್ಸಾಹ ಧನ‌ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ‌ ಮಂಡಳಿ ಉಪಾಧ್ಯಕ್ಷ ಸಂತೋಷ್ ನಾಯ್ಕ್, ನಿರ್ದೇಶಕರಾದ ಚೆನ್ನಕೇಶವ ನಾಯ್ಕ್, ಸೀತಾರಾಮ್ ಬಿ.ಎಸ್., ತಿಮ್ಮಪ್ಪ‌ ನಾಯ್ಕ್, ಪ್ರಸಾದ್ ನಾಯ್ಕ್, ಪ್ರಶಾಂತ್‌ ನಾಯ್ಕ್, ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!