ದ.ಕ ಜಿಲ್ಲೆ ನೈಟ್ ಕರ್ಫ್ಯೂ ಸಡಿಲಿಕೆ ಹಿನ್ನೆಲೆ: ದ್ವಿಚಕ್ರ ವಾಹನ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ: ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ:

 

 

 

ಮಂಗಳೂರು: ದಕ್ಷಿಣ ಕನ್ನಡ ಸರಣಿ ಕೊಲೆ ಬಳಿಕ ವಿಧಿಸಲಾಗಿದ್ದ ನೈಟ್ ಕರ್ಫ್ಯೂ ಸಡಿಲಿಕೆ ಬಳಿಕ ರಾತ್ರಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪ್ರಯಾಣಿಸುವ ಪುರುಷ ಸವಾರರಿಗೆ ನಿರ್ಬಂಧ ಹೇರಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ
: ಮಂಗಳೂರು ನಗರ ಪೊಲೀಸ್ ‌ಕಮಿಷನರ್ ಕಚೇರಿಯಲ್ಲಿ ನಡೆದ ಸರಣಿ ಹತ್ಯೆ ಸಂಬಂಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ನೈಟ್ ಕರ್ಫ್ಯೂ ಇದೆ. ಇದು ಕೊನೆಗೊಂಡ ಬಳಿಕ ರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಹಿಂಬದಿ ಯುವ ಪುರುಷ ಸವಾರರಿಗೆ ನಿರ್ಬಂಧ ಹೇರಲಾಗುವುದು.ಮಹಿಳೆಯರು, ಮಕ್ಕಳು ಮತ್ತು ಹಿರಿಯರಿಗೆ ಇದರಿಂದ ವಿನಾಯಿತಿ ನೀಡಲಾಗುವುದು. ಈ ರೀತಿ ಹಿಂದೆ ಕೇರಳದ ವಯನಾಡಿನಲ್ಲಿ ಮಾಡಲಾಗಿತ್ತು. ಅಲ್ಲಿ ಎಲ್ಲಾ ಪುರುಷ ಸವಾರರಿಗೆ ನಿರ್ಬಂಧ ಹೇರಲಾಗಿತ್ತು. ಇಲ್ಲಿ ಹಿಂಬದಿ ಸಂಚರಿಸುವ ಪುರುಷ ಸವಾರರಿಗೆ ಮಾತ್ರ ನಿರ್ಬಂಧ ಹೇಳಲಾಗುತ್ತದೆ ಎಂದರು.

ಇನ್ನೂ ಕೇರಳ ಗಡಿಯಲ್ಲಿ ನಿಗಾ‌ ಇಡುವ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವ, ಡಿಜಿ ಅವರು ಸಲಹೆ ನೀಡಿದ್ದು, ಅದರಂತೆ ಜಿಲ್ಲೆಯ 18 ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಅಲ್ಲಿ ಸಿಸಿಟಿವಿ ಅಳವಡಿಸಿ, ಕೆಎಸ್​ಆರ್​ಪಿ ಸಿಬ್ಬಂದಿ ನಿಯೋಜಿಸಿ ನಿಗಾ ಇಡಲಾಗುವುದು. ಇದು ಇನ್ನೂ ಒಂದು ವರ್ಷ ಇರಲಿದೆ ಎಂದರು.

error: Content is protected !!