ಬೆಳ್ತಂಗಡಿ:ಗುರುದೇವ ಪದವಿ ಕಾಲೇಜಿನ ಉಪನ್ಯಾಸಕಿ ನಿಧನ

 

 

 

ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ  ಅವರು ಆರೋಗ್ಯದಲ್ಲಿ  ಏರುಪೇರಾಗಿ  ಮಂಗಳೂರಿನ‌ ಆಸ್ಪತ್ರೆಯಲ್ಲಿ    ನಿಧನ ಹೊಂದಿದ್ದಾರೆ.

ಜು 13 ಬುಧವಾರ ಅವರಿಗೆ   ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣ ಅವರನ್ನು ಬೆಳ್ತಂಗಡಿಯ ಸ್ಥಳೀಯ ಆಸ್ಪತ್ರೆಗೆ ಕೊಂಡು ಹೋಗಿ  ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.ಕಳೆದ 7 ವರ್ಷಗಳಿಂದ ಬೆಳ್ತಂಗಡಿಯ ಶ್ರೀ ಗುರುದೇವ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತಿದ್ದ ಅವರು ಪತಿ ತಂದೆ ತಾಯಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.ಜು 15 ರಂದು ಅವರ ಅಂತ್ಯ ಸಂಸ್ಕಾರ ಗುರುವಾಯನಕೆರೆಯ ಪಿಲಿಚಂಡಿ ಕಲ್ಲು ಬಳಿ ಅವರ ನಿವಾಸದಲ್ಲಿ ನಡೆಯಲಿದ್ದು. ಮೃತರ ಗೌರವಾರ್ಥ ಕಾಲೇಜಿಗೂ ನಾಳೆ ರಜೆ ಇರಲಿದೆ.

error: Content is protected !!