ಬೆಳ್ತಂಗಡಿ:ಶಿಕ್ಷಣದಿಂದ ಜಗತ್ತನ್ನೇ ಗೆಲ್ಲಬಹುದು , ಇದಕ್ಕೆ ಇತಿಹಾಸದಲ್ಲಿ ದೇಶ , ವಿದೇಶಗಳ ಮಹಾನ್ ನಾಯಕರು ಮಾಡಿರುವ ಸಾಧನೆಗಳೇ ಸಾಕ್ಷಿ ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷ , ರಾಜ್ಯ ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ಹೇಳಿದರು.
ಅವರು ನಾವರ ಅಯ್ಯಪ್ಪ ಭಜನಾ ಮಂದಿರದಲ್ಲಿ ಜರುಗಿದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ಶಿಕ್ಷಣ, ವಿದ್ಯೆಗೆ ಇರುವ ಮಾನ್ಯತೆ ಯಾವುದೇ ಭೌತಿಕ ವಿಷಯಗಳಿಗೆ ಶಾಶ್ವತವಾಗಿ ಸಿಗುವುದು ಕಷ್ಟ. ಕೇವಲ ಹಣ ಇದ್ದರೆ ಸಾಲದು , ಶಿಕ್ಷಣ ಇದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು ಎಂದ ಅವರು ಶಿಕ್ಷಣವು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ, ಆತ್ಮವಿಶ್ವಾಸವು ಭರವಸೆಯನ್ನು ತುಂಬುತ್ತದೆ, ಭರವಸೆ ಶಾಂತಿಯನ್ನು ಬೆಳೆಸುತ್ತದೆ. ಶಿಕ್ಷಣ ಎಂಬುದು ಕೇವಲ ಕೆಲಸವನ್ನು ಹೇಳಿಕೊಡುವುದಲ್ಲ, ಅದು ಜೀವನವನ್ನೇ ಕಲಿಸುತ್ತದೆ ಎಂದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಪಿತಾಂಬರ ಹೇರಾಜೆ ಮಾತನಾಡಿ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕಾದ ಅಗತ್ಯವಿದೆ. ಮಕ್ಕಳಿಗೆ ಆಸ್ತಿ ಪಾಸ್ತಿ ಮಾಡುವ ಬದಲಾಗಿ ಮಕ್ಕಳನ್ನು ಆಸ್ತಿಯಾಗಿ ಬೆಳೆಸಿದರೆ ಸಮಾಜದಲ್ಲಿ ಉನ್ನತಮಟ್ಟಕ್ಕೆ ಏರಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ
ನಾವರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಯನಂದ ಪೂಜಾರಿ ,ಕುದ್ಯಾಡಿ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಗರಡಿಯ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಕುದ್ಯಾಡಿ, ಸದಸ್ಯರಾದ ಪ್ರಜ್ವಲ್ ಜೈನ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರಾದ ಶ್ರೀಮತಿ ಪುಷ್ಪಾ ನಾವರ, ಬೆಸ್ಟ್ ನಾವರ ಸಮಿತಿಯ ಶ್ರೀಮತಿ ಶಶಿಕಲಾ , ಸದಸ್ಯರಾದ ಪುಷ್ಪರಾಜ್ , ಪ್ರದೀಪ್ ,ಸುಕೇಶ್ ,ಹಫೀಜ್ ಪಿಲ್ಯ, ಪ್ರವೀಣ್ ಗಿರಿಯಪ್ಪ ನಾಯ್ಕ, ಲ್ಯಾನ್ಸಿ ಕುದ್ಯಾಡಿ, ರಾಜು ಸಾಲಿಯಾನ್ ,ಚಿದಾನಂದ ಕೋಟ್ಯಾನ್ ,ಸುರೇಶ್ ಪೂಜಾರಿ ,ಕಿರಣ್, ಕೀರ್ತಿ ಸಂಜೀವ ಪೂಜಾರಿ ಅಲೆಕ್ಕಿ , ಶ್ರೀಮತಿ ಬೇಬಿ, ಮಾಜಿ ಪಂಚಾಯತ್ ಸದಸ್ಯರಾದ ಕೇಶವತಿ ,ಹಾಗೂ ಪ್ರಮುಖರು,ಮಕ್ಕಳು ಪೋಷಕರು ಉಪಸ್ಥಿತರಿದ್ದರು.
ಬೆಸ್ಟ್ ನಾವರ ಸಮಿತಿ ಅಧ್ಯಕ್ಷರಾದ ರಂಜೀತ್ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಸಲಹೆಗಾರರಾದ ನಿತ್ಯಾನಂದ ನಾವರ ಸ್ವಾಗತಿಸಿ,ಬೆಸ್ಟ್ ನಾವರ ಸಮಿತಿಯ ಸಲಹೆಗಾರರಾದ ವೀರೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.