ಎಸ್ ಎಸ್ ಎಲ್ ಸಿ ಮರು ಮೌಲ್ಯ ಮಾಪನ ಲಾಯಿಲ ಸೈಂಟ್ ಮೇರಿಸ್ ಶಾಲಾ ವಿದ್ಯಾರ್ಥಿನಿ ಶ್ರಾವ್ಯ ಡೋಂಗ್ರೆ, ಹಾಗೂ ಮಚ್ಚಿನ‌ ಮೊರಾರ್ಜಿ ದೇಸಾಯಿ ಶಾಲಾ ವಿದ್ಯಾರ್ಥಿ ನಿರಂಜನ್ ರಾಜ್ಯಕ್ಕೆ ಪ್ರಥಮ

 

 

ಬೆಳ್ತಂಗಡಿ:ಕಳೆದ ಮಾರ್ಚ್ ಎಪ್ರಿಲ್ ತಿಂಗಳಲ್ಲಿ  ನಡೆದ  ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂಕ ಕಡಿಮೆ ಬಂದ್ದ ಬಗ್ಗೆ  ಮರು ಮೌಲ್ಯಮಾಪನದಲ್ಲಿ ಲಾಯಿಲ ಸೈಂಟ್ ಮೆರೀಸ್ ಅಂಗ್ಲಮಾದ್ಯಮ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಡೋಂಗ್ರೆ  ಹಾಗೂ ಮಚ್ಚಿನ ಮೊರಾರ್ಜಿ ದೇಸಾಯಿ ಶಾಲಾ ವಿದ್ಯಾರ್ಥಿ ನಿರಂಜನ್  ಪೂರ್ಣ ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ . ಶ್ರಾವ್ಯಾ ಡೋಂಗ್ರೆ ಎಸೆಸೆಲ್ಸಿ ಮರುಮೌಲ್ಯಮಾಪನದ ಬಳಿಕ ಪೂರ್ಣಾಂಕ 625 ಅಂಕ ಗಳಿಸಿದ್ದಾರೆ.
ಈ ಹಿಂದೆ ಕನ್ನಡದಲ್ಲಿ 124 ಮತ್ತು ಇಂಗ್ಲಿಷ್ ನಲ್ಲಿ 99 ಅಂಕಗಳು ಬಂದಿದ್ದವು.
ಈಕೆ ಬೆಳ್ತಂಗಡಿಯ ಮೂಳೆತಜ್ಞ ಡಾ. ಶಶಿಕಾಂತ ಡೋಂಗ್ರೆ ಹಾಗೂ ಉಜಿರೆಯ ದಂತವೈದ್ಯೆ ಡಾ. ದೀಪಾಲಿ ಡೋಂಗ್ರೆಯವರ ಪುತ್ರಿಯಾಗಿದ್ದಾರೆ.

ಅದೇ ರೀತಿ  ಪರೀಕ್ಷೆ ಯಲ್ಲಿ 623 ಅಂಕ ಪಡೆದಿದ್ದ ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿರಂಜನ್ ಮರುಮೌಲ್ಯಮಾಪನದ ನಂತರ
625ರಲ್ಲಿ625 ಅಂಕ ಪಡೆದಿದ್ದಾನೆ.

 

ಸ. ಪ. ಪೂ. ಕಾಲೇಜು ವೇಣೂರು ಇಲ್ಲಿನ ಕು. ಸಂಪದಾ ಕೆ.ಎಸ್. ಈ ಹಿಂದೆ 623 ಅಂಕ ಪಡೆದಿದ್ದು ಇದೀಗ ಮರುಮೌಲ್ಯ ಮಾಪನದ ಬಳಿಕ 624/625 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾಳೆ.

 

ತಾಲೂಕಿನ ಹಲವು  ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಹಾಕಿದ್ದು ತುಂಬಾ ವಿದ್ಯಾರ್ಥಿಗಳ ಅಂಕದಲ್ಲಿ ವ್ಯತ್ಯಾಸ ಕಂಡು ಬಂದಿದೆ.ಪೋಷಕರಿಗೆ ಚಿಂತೆಗೀಡಾಗುವಂತೆ ಮಾಡಿದೆ.

error: Content is protected !!