
ಬೆಳ್ತಂಗಡಿ: ಸಿಡಿಲು ಬಡಿದು ತೆಂಗಿನಮರ ಹೊತ್ತಿ ಉರಿದ ಘಟನೆ ಅಳದಂಗಡಿ ಸಮೀಪದ ಪಿಲ್ಯ ಬಳಿ ನಡೆದಿದೆ.
ಪಿಲ್ಯ ಗ್ರಾಮದ ಶ್ರೀಧರ ಆಚಾರ್ಯ ಅವರ ತೋಟದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿಯುವ ದೃಶ್ಯ ಕಂಡು ಬಂದಿದೆ. ಬುಧವಾರ ಸಂಜೆಯ ವೇಳೆಗೆ ಸಿಡಿಲು ಬಡಿದಿದ್ದು, ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿದೆ. ಸ್ಥಳೀಯರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.