ಕೀವ್ ನಗರದಿಂದ ತಕ್ಷಣ ನಿರ್ಗಮಿಸಿ : ನಾಗರಿಕರಿಗೆ ಎಚ್ಚರಿಕೆ ನೀಡಿದ ಭಾರತೀಯ ರಾಯಭಾರ ಕಛೇರಿ

 

ಬೆಂಗಳೂರು:ರಷ್ಯಾ ಸೇನಾಪಡೆಗಳು ಉಕ್ರೇನ್​ ರಾಜಧಾನಿ ಕೀವ್​​ನಿಂದ ಸ್ವಲ್ಪವೇ ದೂರದಲ್ಲಿದ್ದು, ನಗರದ ಮೇಲೆ ಭಾರಿ ಪ್ರಮಾಣದ ದಾಳಿ ಮಾಡುವ ಸಾಧ್ಯತೆ ಇದೆ. 40 ಕಿಲೋಮೀಟರ್​ ದೂರದುದ್ದಕ್ಕೂ ರಷ್ಯಾ ಸಮರ ವಾಹನಗಳು ಯುದ್ಧ ಸನ್ನದ್ಧವಾಗಿ ನಿಂತಿರುವ ಸ್ಯಾಟಲೈಟ್​ ಫೋಟೊಗಳು ಬಿಡುಗಡೆಗೊಂಡಿದ್ದು, ದಾಳಿಯ ಭೀತಿ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಕೀವ್​​ ನಗರ ಅಪಾಯಕ್ಕೆ ಸಿಲುಕಿದೆ.

ಈ ಹಿನ್ನೆಲೆಯಲ್ಲಿ ಕೀವ್​ ನಗರದಲ್ಲಿ ಇರಬೇಡಿ. ತಕ್ಷಣವೇ ನಿರ್ಗಮಿಸುವಂತೆ ಭಾರತೀಯ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ತಿಳಿಸಿದೆ.

error: Content is protected !!