ಅನ್ಯ ಕೋಮಿನ ಜೋಡಿಯ ವಿವಾಹ: ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರ ವಿರುದ್ಧ ಕ್ರಮಕ್ಕೆ ರಾಷ್ಡ್ರೀಯ ಹಿಂದೂ‌ ಜಾಗರಣಾ ವೇದಿಕೆ ಒತ್ತಾಯ

 

 

 

ಬೆಳ್ತಂಗಡಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅರೆಹೊಳೆಯ ಅನ್ಯಕೋಮಿನ ಯುವಕನ ವಿವಾಹವನ್ನು ಸ್ಥಳೀಯ ಹಿಂದೂ ಯುವತಿಯ ಜೊತೆಗೆ ಫೆ. 21 ರಂದು ಬೆಳ್ತಂಗಡಿಯ ನಡ ಗ್ರಾಮದ ಕುತ್ರೊಟ್ಟು  ದೇವಸ್ಥಾನವೊಂದರ ಅರ್ಚಕರೊಬ್ಬರು ಮಾಡಿಸಿದ್ದು ಈಗಾಗಲೇ ಹಿಜಾಬ್ ವಿಚಾರದಲ್ಲಿ ಪ್ರಕ್ಷುಬ್ದ ವಾತಾವರಣ ಇದ್ದು ಇದೇ ಸಂದರ್ಭದಲ್ಲಿ ಅನ್ಯ ಕೋಮಿನ ಜೋಡಿಗಳ ಪೂರ್ವಪರ ವಿಚಾರಿಸದೇ ದೇವಾಲಯದ ಅರ್ಚಕರು ವಿವಾಹ ಮಾಡುವ ಮೂಲಕ ಶಾಂತಿಯಿಂದ ಇರುವ ಬೆಳ್ತಂಗಡಿಯಲ್ಲಿ ಸಾಮರಸ್ಯ ಕದಡಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿರುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದೆ.ದೂರಿನಲ್ಲಿ ವಿವರಿಸಿದಂತೆ
ದೇವಾಲಯದ ಅರ್ಚಕರನ್ನು ದೇವಸ್ಥಾನಕ್ಕೆ ತೆರಳಿ ವಿಚಾರಿಸಿದಾಗ ಅವರು ನನಗೆ ದುಡ್ಡಿನ ಅವಶ್ಯಕತೆ ಇತ್ತು. ಅದೇ ರೀತಿ  ಭಾಸ್ಕರ್ ಧರ್ಮಸ್ಥಳ ಹಾಗೂ ಸಂದೀಪ್ ಎಂಬವರು ಮದುವೆ ಮಾಡುವಂತೆ ಒತ್ತಡ ಹೇರಿದ್ದರಿಂದ ಮದುವೆ ಮಾಡಿರುತ್ತೇನೆ ಎಂದಿರುತ್ತಾರೆ.  ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಈ ರೀತಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು‌  ಪಿಎಸ್ ಐ ನಂದ ಕುಮಾರ್ ಅವರಿಗೆ   ದೂರು ನೀಡಿದ್ದಾರೆ.ಈ ಸಂದರ್ಭದಲ್ಲಿ ಜಗದೀಶ್ ನಿಡ್ಲೆ, ಮನೋಜ್ ಕುಂಜರ್ಪ, ಸಂದೀಪ್ , ಪ್ರಮೋದ್ ಉಪಸ್ಥಿತರಿದ್ದರು.

error: Content is protected !!