ಎಸ್ ಡಿ ಪಿ ಐ, ಪಿಎಫ್ಐ ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಮತಾಂಧ ಸಂಘಟನೆಗಳನ್ನು ನಿಷೇಧಿಸಿ: ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ್ರತಿಭಟನೆ ಶಿವಮೊಗ್ಗ ಬಜರಂಗದಳ ಕಾರ್ಯಕರ್ತನ ಕೊಲೆ ಖಂಡಿಸಿ ರಸ್ತೆ ತಡೆ.

 

 

 

ಬೆಳ್ತಂಗಡಿ:ಎಸ್ ಡಿ ಪಿ ಐ ಮತ್ತು ಪಿಎಫ್ ಐ ಹಿಂದೂ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ  ನವೀನ್ ನೆರಿಯ ಹೇಳಿದರು. ಅವರು ಶಿವಮೊಗ್ಗದಲ್ಲಿ ಕಳೆದ ರಾತ್ರಿ ಬಜರಂಗದಳ ಕಾರ್ಯಕರ್ತನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳ ದುಷ್ಕ್ರತ್ಯವನ್ನು ಖಂಡಿಸಿ ಹಾಗೂ ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಸರ್ಕಾರಗಳ ಮೇಲೆ ಹಿಂದೂ ಸಮಾಜಕ್ಕೆ ನಂಬಿಕೆ ಹಾಗೂ ಭರವಸೆ ಇಲ್ಲದಂತಾಗಿದೆ ಯಾಕೆಂದರೆ ಹಿಜಾಬ್ ನಂತಹ ದೊಡ್ಡ ಪ್ರಕರಣವಾದಗಲೂ ಅಥವಾ ಹಿಂದೂ ಸಮಾಜದ ದಾಳಿ ನಡೆದಾಗಲೂ ಯಾವುದೇ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿವೆ.

 

ಹಿಂದೂ ಸಮಾಜವು ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಮೇಲೆ ವಿಶ್ವಾಸ ಇಡಬೇಕಾಗಿದೆ ಅಲ್ಲಲ್ಲಿ ಹಿಜಾಬ್ ನ ಮೂಲಕ ಕೋಮು ಗಲಾಭೆಗಳ್ನು ನಡೆಸುವಂತಹ ಹುನ್ನಾರ ನಡೆಸುವ ದೊಡ್ಡ ಷಡ್ಯಂತರ ನಡೆಯುತಿದೆ ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡುವುದೆನೇಂದರೆ ನಿಮಗೆ ಇಂತಹ ದುಷ್ಕ್ರತ್ಯಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆಗಳಿದು ಇದರ ಬಗ್ಗೆ ಉಗ್ರ ರೀತಿಯ ಕ್ರಮ ಕೈಗೊಳ್ಳಬೇಕಾದಿತು ಈ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು ಹಿಂದೂ ಸಮಾಜದ ರಕ್ಷಣೆಗಾಗಿ ಯಾವ ಬಲಿದಾನಕ್ಕೂ ನಮ್ಮ ಕಾರ್ಯಕರ್ತರು ಸಿದ್ದ ಎಂದರು.

 

 

ಎಸ್ ಡಿ ಪಿ ಪಿಎಫ್ಐ ಎಂಬ ಕೋಮು ಶಕ್ತಿಗಳನ್ನು ನಿಷೇಧಿಸಲು ಇನ್ನೆಷ್ಟು ಹಿಂದೂಗಳ ಮಾರಣಹೋಮ ನಡೆಯಬೇಕು ಅದ್ದರಿಂದ ತಕ್ಷಣ ಇಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸಬೇಕು   ತಕ್ಷಣ ಆರೋಪಿಗಳನ್ನು ಬಂಧಿಸಿ ಮತಾಂಧ ಶಕ್ತಿಗಳನ್ನು ನಿಯಂತ್ರಿಸದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು. ಬೆಳ್ತಂಗಡಿ ವಿಧಾನ ಸೌಧದ ಬಳಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಮೂರು ಮಾರ್ಗದ ಬಳಿ ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಪ್ರಮುಖರಾದ ದಿನೇಶ್ ಚಾರ್ಮಾಡಿ,ಸಂತೋಷ್ ಅತ್ತಾಜೆ, ಮೋಹನ್ ಬೆಳ್ತಂಗಡಿ ಹಾಗೂ ಇನ್ನಿತರ ಹಿಂದೂ ಕಾರ್ಯಕರ್ತರು ಭಾಗವಹಿಸಿದರು.

error: Content is protected !!