ಫೆ.19, 20 ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ, ನೇಮೋತ್ಸವ: ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮ ಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ. ಹೇಮರಾಜ್ ಬೆಳ್ಳಿಬೀಡು ಮಾಹಿತಿ

 

 

ಬೆಳ್ತಂಗಡಿ: ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ದೈವಗಳ ಪುನರ್ ಪ್ರತಿಷ್ಠೆ, 108‌ ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮೋತ್ಸವ ಫೆ.19 ಮತ್ತು ಫೆ.20ರವರೆಗೆ ನಡೆಯಲಿದೆ ಎಂದು ಬ್ರಹ್ಮ ಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ. ಹೇಮರಾಜ್ ಬೆಳ್ಳಿಬೀಡು ಹೇಳಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಫೆ.19ರಂದು ಬೆಳಗ್ಗೆ 8ಗಂಟೆಯಿಂದ ದೇವತಾ ಪ್ರಾರ್ಥನೆ, ತೋರಣ ಮಹೂರ್ತ, ಉಗ್ರಾಣ ಮಹೂರ್ತ, ಹೊರಕಾಣಿಕೆ ಸಮರ್ಪಣೆ, ಪುಣ್ಯಹಾ ವಾಹನ, ಗಣಯಾಗ, ನವಗ್ರಹ ಶಾಂತಿ, 11ಗಂಟೆಯಿಂದ ಮರೋಡಿ ಶಾಂತಿನಗರ ಅರುಣೋದಯ ಮಂದಿರದಿಂದ ಹೊರಕಾಣಿಕೆ ಮೆರವಣಿಗೆ, ಸಂಜೆ 4ಗಂಟೆಯಿಂದ ಪುಣ್ಯಾ ವಾಚನ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ಪ್ರಾಕಾರ ಬಲಿ, ದಿಶಾ ಹೋಮ, ಮಂಚಾದಿವಾಸ, ಕಲಶಾಧಿವಾಸ, ಅಧಿವಾಸ ಹೋಮ ನಡೆಯಲಿದೆ‌ ಎಂದರು.
ಫೆ.20ರಂದು ಬೆಳಗ್ಗೆ 7ರಿಂದ ಪುಣಾಹ ವಾಚನ, 8.30ಕ್ಕೆ ಶ್ರೀ ದೈವ ಹಾಗೂ ಕೊಡಮಣಿತ್ತಯ ದೈವಗಳ ಮಂಚಪ್ರತಿಷ್ಠಾಪನೆ, ಕಲಶಾಭಿಷೇಕ ಪರ್ವ ಸಂಕ್ರಾಂತಿ, ದರ್ಶನ, ಸಂಜೆ 6ಗಂಟೆಗೆ ದೈವದ ಭಂಡಾರ ಉಚ್ಚೂರು ಮನೆಯಿಂದ ಹಾಗೂ ಶ್ರೀ ಕೊಡಮಣಿತ್ತಾಯ ಪಾಂಡಿಬೆಟ್ಟು ಗುತ್ತು ಮನೆಯಿಂದ ಹೊರಟು ಸಂಜೆ 7ಗಂಟೆಗೆ ದೇರಾಜೆಬೆಟ್ಟ ಏರುವುದು, ರಾತ್ರಿ 9ರಿಂದ ಶ್ರೀದೈವ ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆಯಲಿದೆ ಎಂದರು.
ಬೆಳಗ್ಗೆ 11.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ ಅಧ್ಯಕ್ಷತೆ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜಾ, ವಿಧಾಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವಾ, ದ.ಕ ಜಿಲ್ಲೆ ಧಾರ್ಮಿಕ ಪರಿಷತ್‌ನ ಸದಸ್ಯ, ಕೊಕ್ರಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ , ಮರೋಡಿ ಗ್ರಾ.ಪಂ ಅಧ್ಯಕ್ಷೆ ಪದ್ಮಶ್ರೀ ಜೈನ್, ಹಾಗೂ ರೂ.50,000ಮೇಲ್ಪಟ್ಟು ಧನಸಹಾಯ ನೀಡಿದವರು ಉಪಸ್ಥಿತರಿರಲಿದ್ದಾರೆ ಎಂದರು.
ರಾತ್ರಿ 8ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮ ಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕೆ. ಹೇಮರಾಜ್ ಬೆಳ್ಳಿಬೀಡು ಅಧ್ಯಕ್ಷತೆ ವಹಿಸಲಿದ್ದು ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೇ.ಮೂ. ಅನಂತ ಪದ್ಮನಾಭ ಅಸ್ರಣ್ಣರು ಆಶಿರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬೆಸ್ಟ್ ಫೌಂಡೇಷನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ, ಅಳಗಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಅಳದಂಗಡಿ ಅರಮನೆ ಮೊದಲಾದವರು ಭಾಗವಹಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬ್ರಹ್ಮಕುಂಭಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ, ಆದಿತ್ಯ ಪಿ.ಕೆ ಮತ್ತೊಟ್ಟು, ಜಿನೇಂದ್ರ ಜೈನ್ ಹರಂಬೆಟ್ಟು ಗುತ್ತು, ಜಯವರ್ಮ ಬುಣ್ಣು ಕುಕ್ಕೆರಬೆಟ್ಟು, ಗುರಿಕಾರರಾದ ಸುರೇಂದ್ರ ಬಲ್ಲಾಳ್ ಮಲ್ಲಾರ ಬೀಡು, ಉಲ್ಲಾಸ್ ಪೂಜಾರಿ ಸುರಭಿ ಉಚ್ಚೂರು, ಯೋಗೇಂದ್ರ ಆಚಾರ್ಯ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!