ಉಜಿರೆಯಲ್ಲಿ ಕಳ್ಳತ‌ನ, ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು.

 

 

 

ಬೆಳ್ತಂಗಡಿ:ಉಜಿರೆ ಗ್ರಾಮದ ಕಕ್ಕೆಜಾಲು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ದ್ವಿಚಕ್ರ ವಾಹನ ಮತ್ತು ಮನೆಗೆ ನುಗ್ಗಿ ಚಿನ್ನಾಭರಣ  ಕಳವುಗೈದ ಆರೋಪಿಯನ್ನು  ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಉಜಿರೆ ಗ್ರಾಮದ ಕಕ್ಕೆಜಾಲು ಎಂಬಲ್ಲಿಯ ಕುಟುಂಬವೊಂದು ಜ 22 ರಂದು ಕಾರ್ಯಕ್ರಮ ನಿಮಿತ್ತ ಮನೆಗೆ ಬೀಗ ಹಾಕಿ ಹೊರ ಜಿಲ್ಲೆಗೆ ಹೋಗಿದ್ದವರು ಜ 23 ರಂದು  ಬಂದಾಗ ಮನೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ  ಇಲ್ಲದನ್ನು ಗಮನಿಸಿ ಮನೆಯ ಒಳಗೆ ಬಂದ್ದು  ನೋಡಿದಾಗ ಮನೆಯ ಹಂಚು ತೆಗೆದು ಕಳ್ಳರು ಮನೆಗೆ ನುಗ್ಗಿ 60 ಸಾವಿರ ನಗದು ಸೇರಿ ಮೊಬೈಲ್ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ಸಹಿತ ಅಂದಾಜು 1,35, 000 ಮೌಲ್ಯದ ಸೊತ್ತುಗಳು ಕಳವುಗೈದಿರುವ ಬಗ್ಗೆ ಗಮನಕ್ಕೆ ಬಂದಿದೆ.‌ಈ ಬಗ್ಗೆ ಮನೆಯವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಡಾಜೆಯ ಇಂತಿಯಾಜ್ ಎಂಬ ಆರೋಪಿಯನ್ನು ಬಂಧಿಸಿ ಕಳವುಗೈದ ಒಟ್ಟು 78,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಂದು ತಿಳಿದು ಬಂದಿದೆ.

error: Content is protected !!