ಸರಕಾರದ ಸೇವೆಗಳಿಗೆ ಖಾಸಗಿ ಸಂಸ್ಥೆಗಳ ಪ್ರೋತ್ಸಾಹ ಅಗತ್ಯ ಉಜಿರೆ ಶ್ರೀ ಧ.ಮಂ. ಆಸ್ಪತ್ರೆಯ ಡಯಾಲಿಸಿಸ್ ಘಟಕ ಉಧ್ಘಾಟಿಸಿ ಸಚಿವ ಸುನಿಲ್ ಕುಮಾರ್

 

 

 

ಬೆಳ್ತಂಗಡಿ:ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಇಡೀ ರಾಜ್ಯದಲ್ಲಿ ಹತ್ತಾರು ರೀತಿಯ ಚಟುವಟಿಕೆಗಳು ಶ್ರೀ ಕ್ಷೇತ್ರದ ವತಿಯಿಂದ ನಡೆಯುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣುತಿದ್ದೇವೆ.ಅದರ ಮುಂದುವರಿದ ಭಾಗವಾಗಿ ಉಜಿರೆಯಂತಹ ಸಣ್ಣ ಪಟ್ಟಣದಲ್ಲಿ ಒಂದು ಸುಸಜ್ಜಿತವಾದ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಹೆಚ್ಚುವರಿ ಸೌಲಭ್ಯಗಳು ಜನರಿಗೆ ಸಿಗಬೇಕು ಎಂಬ ನಿಟ್ಟಿನಲ್ಲಿ ಒಂಬತ್ತು ಹಾಸಿಗೆಯ ಡಯಲಿಸೀಸ್ ಸೆಂಟರ್ ಮಾಡಿಕೊಡುವಂತಹ ಕಾರ್ಯವನ್ನು ಹೆಗ್ಗಡೆ ಯವರು ಮಾಡುತಿದ್ದಾರೆ.ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ ಎಂದು ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆ  ಸಚಿವ‌ ವಿ.ಸುನೀಲ್ ಕುಮಾರ್ ಹೇಳಿದರು.

 

 

ಅವರು ಭಾನುವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ನ ವತಿಯಿಂದ ಉಜಿರೆಯ ಶ್ರೀ ಧರ್ಮಸ್ಥಳ .ಮಂಜುನಾಥೇಶ್ವರ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್ ನ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರದ ಯೋಜನೆಗಳಿಗೆ ಖಾಸಗಿ ಹಾಗೂ ಸೇವಾ ಸಂಸ್ಥೆಗಳು ಪ್ರೋತ್ಸಾಹ ನೀಡಿದರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಈ ನಿಟ್ಟಿನಲ್ಲಿ ಡಾ.ಡಿ.ಹೆಗ್ಗಡೆಯವರು ಅತಿ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಇದು ಗ್ರಾಮೀಣ ಮಟ್ಟದಲ್ಲಿ ಉತ್ತಮ ಸೌಲಭ್ಯಗಳ ಲಭ್ಯತೆಗೆ ಕಾರಣವಾಗಿದೆ. ಡಯಾಲಿಸಿಸ್ ಸೇವೆ ಉಜಿರೆಯಂತಹ ಗ್ರಾಮೀಣ ಭಾಗದಲ್ಲೂ ಆರಂಭವಾಗಿರುವುದು ತಾಲೂಕಿನ ರೋಗಿಗಳಿಗೆ ಹೆಚ್ಚಿನ ಅನುಕೂಲವನ್ನು ನೀಡಿದೆ

 

 

ಮುಖ್ಯಮಂತ್ರಿಗಳ ಅಮೃತ್ ಯೋಜನೆಯಡಿ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದ್ದು,ಎಲ್ಲಾ ತಾಲೂಕುಗಳ ಆಸ್ಪತ್ರೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುವುದು, ಕಳೆದ ಮೂರು ವರ್ಷಗಳಲ್ಲಿ ಸರಕಾರ ಉತ್ತಮ ರೀತಿಯ ಆರೋಗ್ಯ ಸೇವೆ ನೀಡಿದೆ ಎಂದು ಹೇಳಿದರು.

 

 

ಇನ್ನಷ್ಟು ಸೇವೆ:ಡಾ.ಡಿ. ಹೆಗ್ಗಡೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮಾಧಿಕಾರಿ, ಎಸ್.ಡಿ.ಎಂ. ಟ್ರಸ್ಟ್ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ
44 ಲಕ್ಷ ಜನರಿಗೆ ಆರೋಗ್ಯ ವಿಮೆಯನ್ನು ಯೋಜನೆ ವತಿಯಿಂದ ಮಾಡಲಾಗಿದೆ. ಡಯಾಲಿಸಿಸ್ ಗೂ ವಿಮೆ ಸೌಲಭ್ಯ ದೊರಕಲಿದೆ. ಧಾರವಾಡದ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಪಡೆಯುತ್ತಿರುವ ಮಾಹಿತಿ,ವಿಕಾಸ ಕಾರ್ಯಕ್ರಮಗಳು ಆರೋಗ್ಯಸೇವೆಗೆ ಪ್ರೇರಣೆಯಾಗಿವೆ. ರಾಜ್ಯದ ಜನತೆಗೆ ಇನ್ನಷ್ಟು ಸೇವೆಗಳನ್ನು ನೀಡುವ ಕುರಿತು ಯೋಜನೆ ರೂಪಿಸಲಾಗಿದೆ. ಮನುಷ್ಯನ ನೆಮ್ಮದಿಯ ಜೀವನಕ್ಕೆ ಆರೋಗ್ಯ ಮುಖ್ಯ ಎಂದು ಹೇಳಿದರು.

 

 

ಆಸ್ಪತ್ರೆಯ ನೂತನ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ ಜಿಲ್ಲೆಯಲ್ಲಿ ಬೆಳ್ತಂಗಡಿ ಹಾಗೂ ಸುಳ್ಯ ಗ್ರಾಮೀಣ ಪ್ರದೇಶಗಳಾಗಿವೆ ಡಾ.ಡಿ.ಹೆಗ್ಗಡೆಯವರಂತಹ ಸಮಾಜದ ಚಿಂತನೆ ಉಳ್ಳ ವ್ಯಕ್ತಿಗಳಿಂದ ಉತ್ತಮ ಆರೋಗ್ಯ ಹಾಗೂ ಶಿಕ್ಷಣ ಸೇವೆಗಳು ಜನರಿಗೆ ದೊರಕುತ್ತಿವೆ. ಸಮಾಜದಲ್ಲಿ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸ್ವಸಹಾಯ ಸಂಘಗಳು ಸಹಕಾರಿಯಾಗಿವೆ. ಜಿಲ್ಲೆಯಲ್ಲಿ ವೆನ್ಲಾಕ್, ಬೆಳ್ತಂಗಡಿ,ಪುತ್ತೂರು ಹಾಗೂ ಇತರ ಕಡೆ ಸೇರಿ 45 ಡಯಾಲಿಸಿಸ್ ಹಾಸಿಗೆಗಳಿವೆ,ಇದೀಗ ಎಸ್.ಡಿ. ಎಂ. ಆಸ್ಪತ್ರೆಯಲ್ಲಿ 9 ಹಾಸಿಗೆಗಳ ಸೌಲಭ್ಯ ಆರಂಭವಾಗಿರುವುದು ರೋಗಿಗಳಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

 

 

 

ಶಾಸಕ ಹರೀಶ್ ಪೂಂಜ ಮಾತನಾಡಿ ಧರ್ಮಾಧಿಕಾರಿಗಳು ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಇತರರಿಗೆ ಮಾದರಿ. ಕೋವಿಡ್ ಅಲೆಗಳ ಸಂದರ್ಭದಲ್ಲು ರಾಜ್ಯವೇ ಗುರುತಿಸುವಂತಹ ಕೆಲಸಗಳು ಶ್ರೀಕ್ಷೇತ್ರದ ವತಿಯಿಂದ ಜರುಗಿವೆ. ಧರ್ಮಾಧಿಕಾರಿಗಳ ಪ್ರೋತ್ಸಾಹ ಮಾರ್ಗದರ್ಶನ ಆಶೀರ್ವಾದದಿಂದ ತಾಲೂಕಿನಲ್ಲಿ ಯಶಸ್ವಿಯಾಗಿ ಕೋವಿಡ್ ನಿಯಂತ್ರಣಕ್ಕೆ ಬರಲು ಸಾಧ್ಯವಾಯಿತು.ಎಂದು ಹೇಳಿದರು.

 

 

 

 

ವಿಧಾನ ಪರಿಷತ್ ಶಾಸಕರುಗಳಾದ ಪ್ರತಾಪಸಿಂಹ ನಾಯಕ್,ಹರೀಶ್ ಕುಮಾರ್, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಜಿರೆ ಶ್ರೀ‌ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡುವೆಟ್ನಾಯ,ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್,ತಾ.‌ಆರೋಗ್ಯಾಧಿಕಾರಿ ಡಾ.‌ಕಲಾಮಧು ಎಸ್‌. ಡಿ.ಎಂ.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಂಜನ್ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್, ಆಸ್ಪತ್ರೆಯ ನಿರ್ದೇಶಕ ಎಂ.ಜನಾರ್ದನ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್.ಮಂಜುನಾಥ್,ಪಿಡಿಒ‌ ಪ್ರಕಾಶ ಶೆಟ್ಟಿ ನೊಚ್ಚ,ಉದ್ಯಮಿ ಶಶಿಧರ ಶೆಟ್ಟಿ ಬರೋಡಾ,ಮೋಹನ್ ಕುಮಾರ್ ಉಜಿರೆ, ಯೋಗೀಶ್ ನಡಕರ, ಕೇಶವ ಭಟ್ ಅತ್ತಾಜೆ, ಡಾ.ಮೋಹನ್‌ ದಾಸ್ ಕೊಕ್ಕಡ,ಭಾಸ್ಕರ ಧರ್ಮಸ್ಥಳ‌ ಮತ್ತಿತರರು ಉಪಸ್ಥಿತರಿದ್ದರು.
ಸಿಂಧೂರಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ . ಎಸ್‌. ಡಿ.ಎಂ.ಮೆಡಿಕಲ್ ಟ್ರಸ್ಟ್ ನ‌ ಟ್ರಸ್ಟಿ ಡಿ‌.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಆರೈಕೆ ಮತ್ತು ಸೇವಾ ಸಂಯೋಜಕಿ ಹೇಮಾವತಿ ಐ.ಕಾರ್ಯಕ್ರಮ ನಿರೂಪಿಸಿದರು.

 

 

ಆಸ್ಪತ್ರೆಯ ವೈಶಿಷ್ಟ್ಯ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭಾಗ್ಯ ಲಭಿಸಬೇಕು ಎಂಬ ಅಪೇಕ್ಷೆ ಒಂದಿಗೆ ಡಾ.ಡಿ.ಹೆಗ್ಗಡೆಯವರು 2013ರಲ್ಲಿ ಆಸ್ಪತ್ರೆ ಆರಂಭಿಸಿದರು. ಅತ್ಯಾಧುನಿಕ ವೈದ್ಯಕೀಯ ಸೇವೆ ತಜ್ಞವೈದ್ಯರು ನುರಿತ ತಂತ್ರಜ್ಞರ ಜತೆ ತಾಲೂಕಿನಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ಹೊಂದಿರುವ ಏಕೈಕ ಆಸ್ಪತ್ರೆಯಾಗಿದೆ. ಸುಮಾರು 6ಲಕ್ಷದಷ್ಟು ಮಂದಿ ಇದುವರೆಗೆ ವಿವಿಧ ರೀತಿಯ ವೈದ್ಯಕೀಯ ಸೇವೆಗಳನ್ನು ಪಡೆದಿದ್ದಾರೆ. 7 ಕೋಟಿ ರೂ.ಗಿಂತ ಅಧಿಕ ಮೊತ್ತದ ಚಿಕಿತ್ಸೆಯನ್ನು ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಉಚಿತವಾಗಿ ನೀಡಲಾಗಿದೆ. ಸಂಪೂರ್ಣ ಸುರಕ್ಷಾ ಸೇರಿದಂತೆ 26 ವಿವಿಧ ಆರೋಗ್ಯವಿಮೆ ಯೋಜನೆಗಳಡಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಆದ್ಯತೆ ನೀಡಲಾಗಿದೆ.
ವೆಂಟಿಲೇಟರ್, ಪೇಷಂಟ್ ಮೋನಿಟರ್ ಡಿಫಿಬ್ರಿಲೇಟರ್, ಮುಂತಾದ ತಂತ್ರಜ್ಞಾನ, ಹೃದ್ರೋಗಿಗಳಿಗೆ ಉಪಯುಕ್ತವಾಗಿರುವ ಕಾರ್ಡಿಯಾಕ್ ಆಂಬುಲೆನ್ಸ್ ಸೇರಿದಂತೆ ಮೂರು ಆಂಬುಲೆನ್ಸ್, ಫಾರ್ಮಸಿ, ರಕ್ತ ಸಂಚಯ ನಿಧಿ ಇತ್ಯಾದಿ ಸೌಲಭ್ಯಗಳಿಗೆ ಈಗ 9 ಡಯಾಲಿಸಿಸ್ ಹಾಸಿಗೆಗಳ ಸೇವೆಯು ಹೆಚ್ಚುವರಿಯಾಗಿ ಆರಂಭಗೊಂಡಿದೆ.

error: Content is protected !!