ಶಿಸ್ತುಬದ್ಧ ವ್ಯವಹಾರಗಳಿಗೆ ವಿಶೇಷ ಗೌರವ ಇದೆ:ಡಿ. ಹರ್ಷೇಂದ್ರ ಕುಮಾರ್ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ: ಹರೀಶ್ ಪೂಂಜ ಉದ್ಯಮದಲ್ಲಿ ಕಾರ್ಮಿಕರ ಪಾತ್ರ ಮುಖ್ಯ: ಶಶಿಧರ್ ಶೆಟ್ಟಿ ಬರೋಡಾ.

 

 

ಉಜಿರೆ: ಬದುಕಿನಲ್ಲಿ ಸಿಗುವ ಅವಕಾಶಗಳು ಹಾಗೂ ಸೌಲಭ್ಯಗಳ ಸದುಪಯೋಗ ಪಡೆದು ಪ್ರತಿಯೊಬ್ಬರೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವದಿಂದ ಸದಾ ಸ್ಪೂರ್ತಿಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಅಡಗಿಸಿಕೊಳ್ಳಬಾರದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಡಿ 26 ಭಾನುವಾರ ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಕೆ. ಮೋಹನ್ ಕುಮಾರ್ ಮಾಲಕತ್ವದ “ಕನಸಿನ ಮನೆ”ಯನ್ನು ಉದ್ಘಾಟಿಸಿ ಮಾತನಾಡಿದರು.

 

 

ಶಿಸ್ತು, ಸಮಯಪಾಲನೆ, ಬದ್ಧತೆ ಮತ್ತು ಶ್ರಮ ಸಂಸ್ಕೃತಿಯಿಂದ ಸಮಾಜದಲ್ಲಿ ಉತ್ತಮ ಗೌರವ ಮತ್ತು ಮಾನ್ಯತೆ ಸಿಗುತ್ತದೆ. ಕನಸಿನ ಮನೆಯ ರೂವಾರಿ ಕೆ. ಮೋಹನ್ ಕುಮಾರ್ ಅವರ ಸೃಜನಾತ್ಮಕ ಚಿಂತನೆ ಮತ್ತು ಕರ್ತೃತ್ವ ಶಕ್ತಿ ಶ್ಲಾಘಿಸಿ, ಎಂಜಿನಿಯರ್‌ಗಳ ಸಹಯೋಗದೊಂದಿಗೆ ಸಂಶೋಧನಾತ್ಮಕ ಅಧ್ಯಯನ ನಡೆಸಿ ಹೊಸ ವಿನ್ಯಾಸಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

 

 

ಲಕ್ಷ್ಮೀ ಇಂಡಸ್ಟ್ರೀಸ್ ಉದ್ಯಮದ ಜತೆ ಉದ್ಯೋಗವನ್ನು ಸೃಷ್ಟಿಸಿ,ಹಲವು ಕುಟುಂಬಗಳಿಗೆ ಜೀವನಾಧಾರವಾಗಿದೆ. ಉಜಿರೆಯ ಬೆಳವಣಿಗೆಯಲ್ಲಿ ಹಲವು ಹಿರಿಯ ಉದ್ಯಮಿಗಳು ಸಲ್ಲಿಸಿರುವ ಸೇವೆ ಅನನ್ಯವಾದುದು.
ಲಕ್ಷ್ಮಿ ಇಂಡಸ್ಟ್ರೀಸ್ ನ ಮಾಲೀಕ ಮೋಹನ್ ಕುಮಾರ್ ಹಾಗೂ ಉದ್ಯಮಿ ರಾಜೇಶ್ ಪೈ ನೇತೃತ್ವದ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು 2019ರ ಪ್ರವಾಹದ ಸಂದರ್ಭದಲ್ಲಿ ಚಾರ್ಮಾಡಿ ಸೇರಿದಂತೆ ನೆರೆ ಪೀಡಿತ ಪ್ರದೇಶಗಳಲ್ಲಿ ಸಾಹಸ ದೊಂದಿಗೆ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.ಇಂತಹ ಒಗ್ಗಟ್ಟಿನ ಕೆಲಸಗಳು ಇತರರಿಗೆ ಮಾದರಿಯಾಗಿವೆ ಎಂದರು.

ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ: ಹರೀಶ್ ಪೂಂಜ

 

 

ಅಬ್ದುಲ್ ಕಲಾಂ ಹೇಳಿದಂತೆ ಕನಸ್ಸನ್ನು ಕಾಣುವುದಿದ್ದರೆ ನಿದ್ದೆ ಬಾರದ ಕನಸ್ಸನ್ನು ಕಾಣುವ ಮೂಲಕ ನನಸಾಗಿಸಬೇಕು ಅಂತಹ ಕನಸ್ಸನ್ನು ಉಜಿರೆಯಲ್ಲಿ ಕನಸಿನ ಮನೆ ಎಂಬ ಶೋರೂಂ ಮೂಲಕ ಮೋಹನ್ ಕುಮಾರ್ ನನಸು ಮಾಡಿದ್ದಾರೆ ಎಂದು ಹೇಳಲು ಸಂತೋಷವಾಗುತ್ತಿದೆ. ಗ್ರಾಮ ಪೇಟೆಗಳಲ್ಲಿ ಉದ್ಯಮಗಳು ಬೆಳೆದರೆ ತಾಲೂಕು ಅಭಿವೃದ್ಧಿ ಹೊಂದುತ್ತದೆ.ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯದೊಂದಿಗೆ ಲಕ್ಷ್ಮೀ ಇಂಡಸ್ಟ್ರೀಸ್ ಹಾಗೂ ಸಮಾನ ಮನಸ್ಕ ಉದ್ಯಮಿಗಳು, ಸಮಾಜಸೇವಕರು ಸೇರಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ.
ಉಜಿರೆ ಗ್ರಾಮದ ನಿನ್ನಿಗಲ್ಲು ಪ್ರದೇಶದಲ್ಲಿ 108 ಎಕ್ರೆ ಜಾಗದಲ್ಲಿ ಕೈಗಾರಿಕಾ ವಲಯ ಸ್ಥಾಪಿಸುವ ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು.

ಕಾರ್ಮಿಕರ ಪಾತ್ರ ಮುಖ್ಯ: ಶಶಿಧರ್ ಶೆಟ್ಟಿ

 

 

ಉದ್ಯಮಿ ಬರೋಡಾ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಮಾತನಾಡಿ

ಉದ್ಯಮಗಳ ಬೆಳವಣಿಗೆಗೆ ಸಂಸ್ಥೆಯ ಕಾರ್ಮಿಕರ ಪಾತ್ರವು ಅತಿ ಮುಖ್ಯ ಅವರ ಬಗ್ಗೆ ವಿಶೇಷ ಕಾಳಜಿ ಇರುವ ಲಕ್ಷ್ಮೀ ಗ್ರೂಪ್ಸ್ ಮೋಹನ್ ಕುಮಾರ್ ಅವರ “ಕನಸಿನ‌ಮನೆ” ಶೋರೂಂ ಉದ್ಘಾಟನೆ ಸುಂದರ ಉಜಿರೆ ಕಲ್ಪನೆಗೆ ಚಾಲನೆ ನೀಡಿದೆ. ಚಿಕ್ಕ ಊರಿನಲ್ಲಿ ದೊಡ್ಡ ಕಲ್ಪನೆ ಮಾಡುವುದು ದೊಡ್ಡ ಸಾಹಸಕ್ಕೆ ಕೈ ಹಾಕಿದ ಹಾಗೆ ಒಂದು ಉದ್ಯಮ ಆಗಬೇಕಾದರೆ ಅದರ ಹಿಂದೆ ತುಂಬಾ ಪರಿಶ್ರಮ ಇರುತ್ತದೆ ತಂದೆ ಮಾಡಿಕೊಂಡು ಬಂದಂತಹ ಉದ್ಯೋಗವನ್ನು ಇವರು ಮುಂದುವರಿಸಿಕೊಂಡು ಬಂದು ಇವತ್ತು ಸುಂದರವಾದ ಶೋರೂಂ ಮಾಡಿರುವುದು ಮೋಹನ್ ಕುಮಾರ್ ಅವರ ಉದ್ಯಮ ಜೀವನದಲ್ಲಿ ಸಾರ್ಥಕತೆಯ ದಿನ ಎಂದು ಹೇಳಲು ಸಂತೋಷವಾಗುತ್ತಿದೆ. ಉದ್ಯಮದೊಂದಿಗೆ ಸಾಮಾಜಿಕ ಚಿಂತನೆಯಲ್ಲಿ ಬೆಳೆದ ಇವರು ಬದುಕು ಕಟ್ಟೋಣ ಬನ್ನಿ ಎಂಬ ತಂಡವನ್ನು ಕಟ್ಟಿಕೊಂಡು ಹಲವಾರು ಸಮಾಜಸೇವೆ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಅದಲ್ಲದೇ ಬೆಳ್ತಂಗಡಿಯಲ್ಲಿ ಕಳೆದ ಬಾರಿ ಬಂದಂತಹ ನೆರೆ ಸಂದರ್ಭದಲ್ಲಿ ಕೋವಿಡ್ ಸಮಯದಲ್ಲಿ ಕಷ್ಟದಲ್ಲಿದ್ದ ಜನರ ನೋವಿಗೆ ಸ್ಪಂದಿಸಿದ ರೀತಿ ಎಲ್ಲರಿಗೂ ಮಾದರಿ ಎಂದರು.

 

 

 

ಸಂಸ್ಥೆಯ ಮಾಲಕ ಮೋಹನ್ ಕುಮಾರ್ ಮಾತನಾಡಿ ಕೇವಲ ಮೂರು ಜನರೊಂದಿಗೆ 1988ರಲ್ಲಿ ಆರಂಭವಾದ ಉದ್ಯಮ ಪ್ರಸ್ತುತ 180ಕ್ಕೂ ಅಧಿಕ ಜನರಿಗೆ ಉದ್ಯೋಗವನ್ನು ನೀಡಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತೃಶ್ರೀ ಹೇಮಾವತಿ. ವಿ. ಹೆಗ್ಗಡೆ ಉಜಿರೆಯ ವಿಜಯ ರಾಘವ ಪಡ್ವೆನ್ನಾಯ ಆಶೀರ್ವಾದದೊಂದಿಗೆ ಧರ್ಮಸ್ಥಳ ಹರ್ಷೇಂದ್ರಕುಮಾರ್ ಸಂಸ್ಥೆಯ ಮಾರ್ಗದರ್ಶಕರಾಗಿದ್ದುಉತ್ತಮವಾದ ಪ್ರೋತ್ಸಾಹದ ಮೂಲಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ದೂರದ ಗುಜರಾತಿನಲ್ಲಿ ಉದ್ಯಮವನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದ ಶಶಿಧರ್ ಶೆಟ್ಟಿ ಇವರೂ ನನಗೆ ಪ್ರೇರಣೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ಉಜಿರೆಯ ಹಿರಿಯ ಉದ್ಯಮಿ ಮೋಹನ ಶೆಟ್ಟಿಗಾರ್ ಉಪಸ್ಥಿತರಿದ್ದರು.
ವಿಶಿಷ್ಟ ಯಕ್ಷಗಾನ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಸತೀಶ್ ಹೊಸ್ಮಾರ್ ಹಾಗೂ ತಿಮ್ಮಯ್ಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ರಾಜೇಶ್ ಪೈ ವಂದಿಸಿದರು.

ಸನ್ಮಾನ

 

 

ಉಜಿರೆಯ ಹಿರಿಯ ಉದ್ಯಮಿ ಪಾಂಡುರಂಗ ಬಾಳಿಗ, ಇಂಜಿನಿಯರ್ ಸಂಪತ್ ರತ್ನ, ಗುತ್ತಿಗೆದಾರ ಜನಾರ್ದನ್ ಅವರನ್ನು ಸನ್ಮಾನಿಸಲಾಯಿತು. ಶನಿವಾರ ಸಂಜೆ ಸಂಸ್ಥೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು.

 

ಕನಸಿನ ಮನೆಯಲ್ಲಿ ವಿವಿಧ ವಿನ್ಯಾಸದ ಗದಿಗೆ ಕಂಬ,ಆರ್ಚ್ ದ್ವಾರ,ಫೈಬರ್ ನ ದಾರಂದ,ಬಾಗಿಲು ಕಿಟಕಿ,ಸಿಮೆಂಟ್ ನ ದಾರಂದ ಕಿಟಕಿ, ಮರ ಹಾಗೂ ಸ್ಟೀಲ್ ನ ಬಾಗಿಲು,ದಾರಂದ ಹಾಗೂ ಮನೆ ನಿರ್ಮಾಣದ ಗುಣಮಟ್ಟದ ಅಗತ್ಯ ಸಾಮಾಗ್ರಿಗಳು ಲಭ್ಯ ಇವೆ.

error: Content is protected !!