ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಅಪ್ರಾಪ್ತೆಗೆ ಅಶ್ಲೀಲ ಚಿತ್ರ ತೋರಿಸಿ, ಕೊಲ್ಲುವುದಾಗಿ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ, ಮಹಿಳಾ ಮೋರ್ಚಾ ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಕೊಯ್ಯೂರು ಗ್ರಾಮದ ಬಾಲಕಿಯನ್ನು ನಿರ್ಮಾಣ ಹಂತದ ಮನೆಗೆ ಕರೆದುಕೊಂಡು ಹೋಗಿ ಮೊಬೈಲ್ ನಲ್ಲಿದ್ದ ಅಶ್ಲೀಲ ಚಿತ್ರ ತೋರಿಸಿ ಬೊಬ್ಬೆ ಹೊಡೆದರೆ ಕೊಲ್ಲುವುದಾಗಿ ಬೆದರಿಸಿ ಆರೋಪಿ ಜಯಾನಂದ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಡಿ 13 ಸೋಮವಾರ ಪ್ರಕರಣ ದಾಖಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಯಿತು.
ನಂತರ ಸಂತೃಸ್ತ ಬಾಲಕಿ ಹಾಗೂ ಮನೆಯವರಿಗೆ ಸಾಂತ್ವನ ತಿಳಿಸಿ ಧೈರ್ಯ ತುಂಬಲಾಯಿತು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸವಿತಾ ಶೆಟ್ಟಿ ಲಾಯಿಲ, ಪ್ರಮುಖರಾದ ಸಿಕೆ ಚಂದ್ರಕಲಾ, ರಜನಿ ಕುಡ್ವ, ನಳಿನಿ, ನೇತ್ರ ಕುಂಟಿನಿ, ಸುಮಲತಾ ಶೆಟ್ಟಿ ಮುಂಡಾಜೆ, ಪೂರ್ಣಿಮಾ, ದೀಪ ಶೆಣೈ, ಸುಗಂಧಿ ಜಗನ್ನಾಥ್ ಲಾಯಿಲ, ಕವಿತಾ, ಉಪಸ್ಥಿತರಿದ್ದರು.