ರಸ್ತೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ: ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಅವಾಂತರ: ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಂದ ರಕ್ಷಣಾ ಕಾರ್ಯ: ಸಾರ್ವಜನಿಕರ ಮೆಚ್ಚುಗೆ

 

 

 

ಬೆಳ್ತಂಗಡಿ: ತಾಲೂಕಿನಾದ್ಯಂತ ನ 14 ಆದಿತ್ಯವಾರ ವಿಪರೀತ ಮಳೆಯಾಗಿದ್ದು ಮದ್ಯಾಹ್ನ ಪ್ರಾರಂಭವಾದ ಅತಿಯಾದ ಮಳೆಯು ರಾತ್ರಿ ತನಕ ಎಡೆಬಿಡದೇ ಸುರಿದ ಪರಿಣಾಮ ಕೆಲವು ಕಡೆ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಈ ಸಂದರ್ಭ ರಸ್ತೆಯಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಯೊಬ್ಬರು ತನ್ನ ಸ್ಕೂಟರ್ ಮೂಲಕ ರಸ್ತೆ ದಾಟಲು ಯತ್ನಿಸುತಿದ್ದಾಗ ನೀರಿನ ರಭಸಕ್ಕೆ  ಸಿಲುಕಿ ಸ್ಕೂಟರ್ ನೊಂದಿಗೆ  ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದ್ದಾರೆ. ಇದೇ ಸಮಯದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಗುಂಡ್ಯ ನದಿಯಲ್ಲಿ ಯುವಕನೊಬ್ಬ ಮುಳುಗಿ ನಾಪತ್ತೆಯಾಗಿದ್ದು ಹುಡುಕಾಟದ ಕಾರ್ಯಾಚರಣೆಗಾಗಿ ಹೋಗಿ ಊರಿಗೆ  ವಾಪಸ್ಸಾಗುತಿದ್ದ ಬೆಳಾಲು ಉಜಿರೆ ಘಟಕದ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ರಕ್ಷಿಸಿ ಬೈಕ್ ನ್ನು ಹಗ್ಗ ಕಟ್ಟಿ ಮೇಲೆ ಎತ್ತಿದ್ದಾರೆ.

 

 

ಸ್ಕೂಟರ್ ಸವಾರ ನಿಡ್ಲೆಯವರೆಂದು  ತಿಳಿದು ಬಂದಿದೆ.ಕಾರ್ಯಚರಣೆಯಲ್ಲಿ ಬೆಳಾಲ್ ಘಟಕದ  ಹರೀಶ್, ಯಶೋಧರ, ಸಂತೋಷ್, ರವೀಂದ್ರ ಸೇರಿದಂತೆ 6 ಸ್ವಯಂಸೇವಕರು  ಪಾಲ್ಗೊಂಡಿದ್ದರು.ಇವರ ಸ್ಪಂದನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಪತ್ತು ತಂಡದ ಸದಸ್ಯ ರವೀಂದ್ರ ಅವರು ಪ್ರಜಾಪ್ರಕಾಶ ನ್ಯೂಸ್ ನೊಂದಿಗೆ ಮಾತನಾಡಿ,  ನಾವು ಗುಂಡ್ಯ ನದಿಯಲ್ಲಿ  ಕಳೆದ ನಾಲ್ಕು ದಿನಗಳ ಹಿಂದೆ  ಮುಳುಗಿ ನಾಪತ್ತೆಯಾಗಿದ್ದ ಯುವಕನನ್ನು ಹುಡಕಾಡಲು ಹೋಗಿ ನ 14 ಆದಿತ್ಯವಾರ ಮದ್ಯಾಹ್ನ 3 ಗಂಟೆ ಸುಮಾರಿಗೆ ಹಿಂದಿರುಗಿ ಬರುತಿದ್ದ ಸಂದರ್ಭದಲ್ಲಿ ಕೊಕ್ಕಡದ ಸಮೀಪದ  ಪೆರಿಯಶಾಂತಿ ಹತ್ತಿರ  ವಿಪರೀತ ಮಳೆಯಿಂದಾಗಿ ಹಳ್ಳದ ನೀರು ರಭಸವಾಗಿ ನೆರೆಯ ರೀತಿಯಲ್ಲಿ ರಸ್ತೆಯಲ್ಲಿ  ಹರಿಯುತಿದ್ದು  ರೈನ್ ಕೋಟ್ ಧರಿಸಿದ್ದ  ಸ್ಕೂಟರ್ ಸವಾರರೊಬ್ಬರು ನೋಡನೋಡುತಿದ್ದಂತೆ  ನೀರಿನ ರಭಸಕ್ಕೆ ಆಯ ತಪ್ಪಿ ಕೆಳಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗುತ್ತಿರುವುದನ್ನು ಗಮನಿಸಿದ ನಮ್ಮ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ಹಾಗೂ ಸ್ಕೂಟರ್ ನ್ನು  ಹಗ್ಗದ ಸಹಾಯದಿಂದ    ರಕ್ಷಿಸಿದ್ದೇವೆ ಒಂದು ವೇಳೆ ನಾವು ಬರುವುದು ಸ್ವಲ್ಪ ತಡವಾಗುತಿದ್ದರೂ ದೊಡ್ಡ ಅಪಾಯ ಸಂಭವಿಸುತಿತ್ತು.ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

error: Content is protected !!