ಚಿಕ್ಕ ಮಕ್ಕಳನ್ನು ಬೈಕಿನಲ್ಲಿ ಕರೆದುಕೊಂಡು ಹೋಗುವವರಿಗೆ ಹೊಸ ರೂಲ್ಸ್. ನಿಯಮ-2021ರ ಅಡಿಯಲ್ಲಿ ಹೊಸ ನಿಯಮಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ.

 

 

ದೆಹಲಿ: ಸಾರಿಗೆ ಸಂಚಾರ ಸುಗಮವಾಗಿರಲು ಮತ್ತು ವಾಹನ ಸವಾರರ ರಕ್ಷಣೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮ ಕೈಗೊಂಡಿವೆ. ಈಗ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಿಗೂ ಕೂಡಾ ಕೆಲವೊಂದು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಈ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು ವಾಹನದ ಹಿಂಬದಿಯಲ್ಲಿ ಕುಳಿತು ಸಾಗುವ ನಾಲ್ಕು ವರ್ಷ ವಯಸ್ಸಿನೊಳಗಿನ ಮಕ್ಕಳಿಗಾಗಿ ಕೇಂದ್ರೀಯ ಮೋಟಾರು ವಾಹನಗಳ ತಿದ್ದುಪಡಿ ನಿಯಮ-2021ರ ಅಡಿಯಲ್ಲಿ ಈ ಕೆಳಗಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಬೈಕ್ ರೈಡರ್​ಗೆ ಹೊಂದಿಕೊಂಡಂತಿರುವ ಸುರಕ್ಷತಾ ಉಡುಪನ್ನು ಮಕ್ಕಳು ಧರಿಸಬೇಕು.

ಸುರಕ್ಷತಾ ಉಡುಪು ಹಗುರವಾಗಿದ್ದು, ವಾಟರ್​ಪ್ರೂಫ್ ಆಗಿರಬೇಕು.

ನೈಲಾನ್ ಅಥವಾ ಹೆಚ್ಚು ನೂಲಿನಿಂದ ಉಡುಪನ್ನು ತಯಾರಿಸಿರಬೇಕು.

30 ಕೆಜಿ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಆ ಉಡುಪಿಗೆ ಇರಬೇಕು.

ಬೈಕ್ ಚಾಲಕ ಕೂಡಾ ಸೊಂಟದ ಸುತ್ತಲೂ ಬೆಲ್ಟ್​​ನಂಥಹ ಉಡುಪನ್ನು ಧರಿಸಬೇಕು.

ಬೈಕ್ ಸವಾರ ಧರಿಸಿರುವ ಬೆಲ್ಟ್​ಗೆ ಮಕ್ಕಳನ್ನು ಗಟ್ಟಿಯಾಗಿ ಸಂಪರ್ಕಿಸಿರಬೇಕು.

9 ತಿಂಗಳ ಮೇಲಿನ ಮತ್ತು 4 ವರ್ಷದ ಒಳಗಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ.

ಹೆಲ್ಮೆಟ್​ Bureau of Indian Standards Act- 2016 ನಿಯಮಗಳನ್ನು ಒಪ್ಪುವಂತಿರಬೇಕು.

4 ವರ್ಷದೊಳಗಿನ ಮಕ್ಕಳನ್ನು ಕರೆದೊಯ್ಯುವಾಗ ಬೈಕ್ ವೇಗ ಗಂಟೆಗೆ 40 ಕಿ.ಮೀ ಮೀರಬಾರದು.

ಈ ನಿಯಮಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದು, ಹೊಸ ನಿಯಮಗಳನ್ನು ಮಕ್ಕಳ ಸುರಕ್ಷತೆಗಾಗಿ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

error: Content is protected !!