ಕೆರೆಯ ತ್ಯಾಜ್ಯವನ್ನು ಸ್ವಚ್ಚಗೊಳಿಸಿದ ಮಡಂತ್ಯಾರ್ ಜೆಸಿಐ. ಮಾದರಿ ಕಾರ್ಯಕ್ರಮದ ಮೂಲಕ ವಿಭಿನ್ನ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ.

 

 

ಮಡಂತ್ಯಾರ್ :ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಪ್ರಯುಕ್ತ ಜೆಸಿಐ ಮಡಂತ್ಯಾರು ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ನಡೆಸಿದ್ಧು,ಪಾರೆಂಕಿ ಗ್ರಾಮದ ಅಂಕರಕಟ್ಟೆ ಎಂಬಲ್ಲಿರುವ ಸಾರ್ವಜನಿಕ ಕೆರೆಯಲ್ಲಿ ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯ ದಿಂದ ಕೆರೆಯು ಮಲಿನಗೊಂಡಿದ್ದು ಇದನ್ನು ಶುಚಿತ್ವ ಮಾಡುವ ಮೂಲಕ ಕಾರ್ಯವನ್ನು ನಡೆಸಲಾಯಿತು .

 

 

ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ  ಜೇಸಿ ಪ್ರಸನ್ನ ಶೆಟ್ಟಿ ಪ್ರಾಸ್ತಾವಿಕವಾಗಿ  ಮಾತನಾಡಿ  ಶುಚಿತ್ವದ ಬಗ್ಗೆ ಅರಿವು ಮೂಡಿಸಿದರು., ಘಟಕದ ಪದಾಧಿಕಾರಿಗಳು, ಪೂರ್ವಧ್ಯಕ್ಷರು ಜೆಜೆಸಿ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಜೊತೆಗೆ ವಾರ್ಡಿನ ಸ್ಥಳೀಯ ಸದಸ್ಯ  ಉಮೇಶ್ ಸುವರ್ಣ ಹಲೆಕ್ಕಿ ,  ಹರೀಶ್ ಶೆಟ್ಟಿ ಪದೆಂಜಿಲ,  ವಿಶ್ವನಾಥ ಪೂಜಾರಿ ಹಾರಬೆ ಶುಭ ಹಾರೈಸಿದರು.ಬೂತ್ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕೋಟೆ, ಹಲೆಕ್ಕಿ ಫ್ರೆoಡ್ಸ್ ಕ್ಲಬ್ ನ ಸಂಚಾಲಕ ರಾಮಣ್ಣ ಹಲೆಕ್ಕಿ,ಸ್ಥಳೀಯರಾದ ಜನಾರ್ಧನ ಆಚಾರ್ಯ ಮತ್ತಿತರರು ಬೆಂಬಲ ನೀಡಿದರು. ಕೆರೆಯಲ್ಲಿದ್ದ ಎಲ್ಲಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಕಸದ ವಿಲೇವಾರಿ ಮಾಡಲಾಯಿತು.ಕೋಟೆ- ಪದೆಂಜಿಲದ ಆಸು ಪಾಸಿನ ನಾಗರಿಕರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಕಾರ್ಯದರ್ಶಿ ಚಿತರಂಜನ್ ಎಂ ಧನ್ಯವಾದವಿತ್ತರು.

error: Content is protected !!