ಉಜಿರೆ ಪಡುವೆಟ್ಟು ಗದ್ದೆಯಲ್ಲಿ “ಗೋವಿಗಾಗಿ ಮೇವು” ಪ್ರಯುಕ್ತ ‘ನೇಜಿನಾಟಿ’ ಕಾರ್ಯಕ್ರಮ. ರೋಟರಿ ಕ್ಲಬ್ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಆಶ್ರಯದಲ್ಲಿ ಮಾದರಿ ಕಾರ್ಯಕ್ರಮ

 

 

ಉಜಿರೆ:”ಗೋವಿಗಾಗಿ ಮೇವು” ಅಭಿಯಾನದ ಪ್ರಯುಕ್ತ ಭಾನುವಾರ ಉಜಿರೆ ಗ್ರಾಮದ ಪಡುವೆಟ್ಟು ಗದ್ದೆಯಲ್ಲಿ‌ ‘ನೇಜಿನಾಟಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ
ನೇಜಿನಾಟಿ ಕಾರ್ಯಕ್ರಮವನ್ನು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡುವೆಟ್ನಾಯ  ಉದ್ಘಾಟಿಸಿ ಶುಭ ಹಾರೈಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ 75 ನೇ ಸ್ವಾತಂತ್ಯ ಅಮೃತ ಮಹೋತ್ಸವ ಸಂದರ್ಭ ಕಳೆಂಜದ ನಂದಗೋಕುಲ ಗೋ ಶಾಲೆಯಲ್ಲಿ ಗೋವಿಗಾಗಿ ಮೇವು ಎಂಬ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು ಅದರ ಮುಂದುವರಿದ ಭಾಗವಾಗಿ ರೋಟರಿ ಕ್ಲಬ್ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಜಂಟಿ ಆಶ್ರಯದಲ್ಲಿ ಈ ಮಾದರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.ಉದ್ಘಾಟನಾ ಬಳಿಕ ಎರಡು ಗದ್ದೆಯಲ್ಲಿ ನೇಜಿನಾಟಿ ಮಾಡಲಾಯಿತು ನಂತರ ಯುವಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು
ಕಾರ್ಯದರ್ಶಿ ಅಬೂಬಕ್ಕರ್ , ನ್ಯಾಯವಾದಿ ಮನೋರಮ,ವಂದನಾ  ಬದುಕು ಕಟ್ಟೋಣ ಬನ್ನಿ ತಂಡ ಸಂಚಾಲಕ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ,ಸುರಕ್ಷಾ ಮೇಡಿಕಲ್ ಮಾಲಕ ಶ್ರೀಧರ್.ಕೆ.ವಿ,ಉದ್ಯಮಿ ಜಯಪ್ರಕಾಶ್ ಶೆಟ್ಟಿ , ಉದ್ಯಮಿ ರವಿಚಂದ್ರ ಚಕ್ಕಿತ್ತಾಯ, ಪ್ರಕಾಶ್ ಗೌಡ ಅಪ್ರಮೇಯ,ಕಲ್ಮಂಜ ಗ್ರಾ.ಪಂ ಅಧ್ಯಕ್ಷ ಶ್ರೀಧರ್ ಮಡಿವಾಳ, ಯೊಗೀಶ್ ಕೊಳಪ್ಪಲ,ಶ್ರೀಧರ್ ಗೌಡ ಮರಕಡ,ಶಶಿಧರ್.ಎಮ್.ಕಲ್ಮಂಜ, ತಿಮ್ಮಯ್ಯ ನಾಯ್ಕ್,ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಮತ್ತು ರೋಟರಿ ಕ್ಲಬ್ ಸದಸ್ಯರು ಭಾಗಿಯಾಗಿದ್ದರು.

ಕಾರ್ಯಕ್ರಮವನ್ನು ನ್ಯಾಯವಾದಿ ಧನಂಜಯ್ ರಾವ್ ಮತ್ತು ಸತೀಶ್ ಹೊಸ್ಮಾರ್ ನಿರೂಪಿಸಿದರು.

error: Content is protected !!