ಕೆಲ್ಸ ಮಾಡೋಕೆ ಮನಸಿಲ್ವಾ ನಿಮ್ಗೆ…? ನಿದ್ದೆ ಮಾಡ್ತಾ ಇದ್ದೀರಾ…!?: ಜಿಲ್ಲಾ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಮಾಸ್ಕ್, ಗ್ಲೌಸ್ ಕೊರತೆ ಕಂಡು ಜಿಲ್ಲಾಧಿಕಾರಿಗೂ ಎಚ್ಚರಿಕೆ ನೀಡಿದ ಸಿ.ಎಂ.: ಕೋವಿಡ್-19‌‌ ನಿಯಂತ್ರಣ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ‌ತರಾಟೆ

ಮಂಗಳೂರು: ನೀವೇನು ನಿದ್ದೆ ಮಾಡ್ತಾ ಇದ್ದೀರಾ…? ಮಾಸ್ಕ್ ‌ಕಡಿಮೆ ಇರುವ ಮಾಸ್ಕ್ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ಯಾಕೆ ತರಲಿಲ್ಲ, ನಿಮಗೆ ಕೆಲಸ ಮಾಡುವ ಮನಸ್ಸು ಇಲ್ವಾ…?‌ಮಾಸ್ಕ್ ಸ್ಟಾಕ್ ಎಷ್ಟು ಇದೆ, ಎಷ್ಟು ಇಲ್ಲ…? ಸ್ಟಾಕ್ ಖಾಲಿಯಾಗಿರುವುದು ನಿಮ್ಮ ಗಮನಕ್ಕೆ ಬರಲಿಲ್ಲವೇ…?? ನಮಗೆ ಅರ್ಥವಾಗುತ್ತದೆ, ಹೆಚ್ಚುವರಿ ಬೇಕಾಗುತ್ತದೆ. ಬೇರೆಯವರು ತಿಳಿಸಿ ನಿಮಗೆ ಇದು ಗೊತ್ತಾಗ್ಬೇಕಾ… ಹೀಗೆ ಜಿಲ್ಲಾ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಅವರು ಮಂಗಳೂರಿಗೆ ಗುರುವಾರ ಆಗಮಿಸಿದ್ದು, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಹವಾಲು ಆಲಿಸಿ ಮಾತನಾಡಿದರು.

ಮಾಸ್ಕ್ ಹಾಗೂ ಗ್ಲೌಸ್ ಕೊರತೆಯಾಗಿರುವ ವಿಚಾರ ಅರಿತು ಜಿಲ್ಲಾಧಿಕಾರಿ ವಿರುದ್ಧವೂ ಗರಂ ಆದರು. “N-95 ಮಾಸ್ಕ್ ಇಲ್ಲದೆ ಹೇಗೆ ಆಡಳಿತ ನಡೆಸುತ್ತೀರಾ? ಅಷ್ಟೂ ಕಾಮನ್ ಸೆನ್ಸ್ ಇಲ್ವಾ ನಿಮ್ಗೆ..? ನಿಮ್ಮಲ್ಲಿ ಎಸ್ ಡಿಆರ್ ಎಫ್ ಫಂಡ್ ಇದೆಯಲ್ಲ ಕೂಡಲೇ ಅದನ್ನು ಬಳಸಿ ಸ್ಥಳೀಯವಾಗಿ ಮಾಸ್ಕ್, ಅಗತ್ಯ ವಸ್ತು ಖರೀದಿಸಿ. ಅಗತ್ಯ ವಸ್ತುಗಳನ್ನು ದಾಸ್ತಾನು ಇಟ್ಟುಕೊಳ್ಳದೆ ನೌಕರರು ಕೆಲಸ ಮಾಡುವುದಾದರೂ ಹೇಗೆ, ನಿಮಗೆ ಎಲ್ಲಾ ಅಧಿಕಾರಗಳನ್ನು ಕೊಟ್ಟರೂ ಸಾಮಾನ್ಯ ಕೆಲಸ ಮಾಡಲು ನಿಮ್ಮಿಂದ ಆಗುವುದಿಲ್ಲವೇ…?” ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಭೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್, ಉಸ್ತುವಾರಿ ಸಚಿವ ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲು, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!