ಬೆಳ್ತಂಗಡಿ: ಸುಲ್ಕೇರಿ ಬಳಿಯ ಜಂತಿಗೋಳಿ ಬಳಿ ಮನೆಯಲ್ಲಿ ಆಟವಾಡುತ್ತಿದ್ದ ಸುಮಾರು ಎರಡುವರೆ ವರ್ಷ ಪ್ರಾಯದ ಹೆಣ್ಣು ಮಗು ಅಗಸ್ಟ್ 10 ಮಂಗಳವಾರ ನಾಪತ್ತೆಯಾಗಿದ್ದು ಬುಧವಾರ ಬೆಳಿಗ್ಗೆ ಸಮೀಪದ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಜಂತಿಗೋಳಿ ಬಳಿಯ ಪರಾರಿ ಎಂಬಲ್ಲಿನ ಸುಭಾಶ್-ಸುಚಿತ್ರಾ ಎಂಬುವರ ಪುತ್ರಿ ದೃತ್ವಿ ಯನ್ನು ಮನೆಯಲ್ಲಿ ಅಜ್ಜನ ಜೊತೆ ಬಿಟ್ಟು, ತಾಯಿ ಹಾಗೂ ಅಜ್ಜಿ ಹುಲ್ಲು ತರಲು ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಹಿಂಬಲಿಸಿಕೊಂಡು ಮಗು ಹೋಗಿ ಸಮೀಪದಲ್ಲೇ ಹರಿಯುತ್ತಿರುವ ನದಿ ಕಡೆಗೆ ಹೋಗಿರುವ ಸಂಶಯದಲ್ಲಿ ನಿನ್ನೆಯಿಂದ ಮಗುವಿಗಾಗಿ ಅಗ್ನಿಶಾಮಕ ದಳ, ಎನ್ಡಿ ಆರ್ಎಫ್ ಹಾಗೂ ಸ್ಥಳೀಯರ ಸಹಕಾರದಲ್ಲಿ ಹುಡುಕಾಟ ನಡೆಸಲಾಗಿತ್ತು.
ಅದರೆ ನಿನ್ನೆ ರಾತ್ರಿಯಾದ್ದರಿಂದ ಇವತ್ತು ಬೆಳಿಗ್ಗೆ ಹುಡುಕಾಟ ಪ್ರಾರಂಭಿಸಿದಾಗ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಎಂದು ತಿಳಿದು ಬಂದಿದೆ.