ಬೆಳ್ತಂಗಡಿ: ನೀವು ಕೋವಿಡ್-19 ನಿರೋಧಕ ಲಸಿಕೆ ಪಡೆದಿದ್ದೀರಾ…? ಹಾಗಾದ್ರೆ ನಿಮ್ಮ ಅಂಗೈಗೆ ಲಸಿಕೆ ಸರ್ಟಿಫಿಕೇಟ್, ವಾಟ್ಸ್ಯಾಪ್ ಮೂಲಕ ಶೀಘ್ರ ಹಾಗೂ ಸರಳ ಪ್ರಕ್ರಿಯೆ ಮೂಲಕ ತಲುಪಲಿದೆ. ನೀವು ಏನು ಮಾಡಬೇಕು, ಯಾವೆಲ್ಲಾ ಸಂದೇಶಗಳನ್ನು ರವಾನಿಸಬೇಕು ಎಂಬ ಬಹು ಸರಳ ವಿವರವನ್ನು ‘ಪ್ರಜಾಪ್ರಕಾಶ ನ್ಯೂಸ್’ ತಂಡ ನಿಮ್ಮ ಮುಂದಿಟ್ಟಿದೆ.
ಇಲ್ಲಿದೆ ಪ್ರತಿ ಹೆಜ್ಜೆಯ ಸರಳ ವಿವರಗಳು…
ಹೆಜ್ಜೆ 1: ನೀವು ಲಸಿಕೆ ನೀಡಲು ಬಳಸಿದ ಸಂದರ್ಭ ನೀಡಿದ ದೂರವಾಣಿ ಸಂಖ್ಯೆಯ ಮೊಬೈಲ್ ನಲ್ಲಿ 9013151515 ಕೊರೋನಾ ಹೆಲ್ಪ್ ಡೆಸ್ಕ್ ಸಂಖ್ಯೆಯನ್ನು ಸೇವ್(ಉಳಿಸಿ) ಮಾಡಿಕೊಳ್ಳಬೇಕು.
ಹೆಜ್ಜೆ 2: ಸೇವ್ ಮಾಡಿಕೊಂಡ ಸಂಖ್ಯೆಯ ವಾಟ್ಸ್ಯಾಪ್ ನಂ.ಗೆ ತೆರಳಿ ಅಲ್ಲಿ ಆಂಗ್ಲ ಭಾಷೆಯಲ್ಲಿ Download certificate ಎಂದು ನಮೂದಿಸಿ ಸೆಂಡ್ ಮಾಡಬೇಕು.
ಹೆಜ್ಜೆ 3: ಓಟಿಪಿ ದಾಖಲಿಸಲು ಸೂಚನೆ ಬರುತ್ತದೆ. ನಮ್ಮ ಮೊಬೈಲ್ ಸಂಖ್ಯೆಗೆ 6 ಸಂಖ್ಯೆಗಳ ಒಟಿಪಿ ಸಂದೇಶ ಬರುತ್ತದೆ. ಇದನ್ನು ನಮೂದಿಸಿ ಸೆಂಡ್ ಮಾಡಬೇಕು.
ಹೆಜ್ಜೆ 4: ಒಟಿಪಿ ನಮೂದಿಸಿದಾಗ ನಮ್ಮ ಹೆಸರು ಬರುತ್ತದೆ. ಸರ್ಟಿಫಿಕೇಟ್ ಪಡೆಯಲು ದೃಢೀಕರಣಕ್ಕಾಗಿ 1 ಸಂಖ್ಯೆಯನ್ನು ನಮೂದಿಸುವಂತೆ ಕೋರಲಾಗುತ್ತದೆ. 1 ಸಂಖ್ಯೆಯನ್ನು ನಮೂದಿಸಿ ಸೆಂಡ್ ಮಾಡಿದಾಗ ಸರ್ಟಿಫಿಕೇಟ್ ಲಭ್ಯವಾಗುತ್ತದೆ. ಇದು ಪಿಡಿಎಫ್ ಮಾದರಿಯಲ್ಲಿದ್ದು, ತೆರೆದು ನೋಡಬಹುದಾಗಿದೆ.