ಬೆಳ್ತಂಗಡಿ: ಕಳೆಂಜ ಗೋಶಾಲೆಯ ಗೋವುಗಳಿಗೆ ಆಹಾರ, ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಹಾಗೂ ಸೇವಾಶ್ರಮದಲ್ಲಿ ಬಟ್ಟೆ ವಿತರಿಸುವ ಮೂಲಕ ತುಳು ಸಂಘ ಬರೋಡಾ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಗುರುವಾಯನಕೆರೆ ಸಾಯಿರಾಂ ಪ್ರೆಂಡ್ಸ್ ಹಾಗೂ ನವಶಕ್ತಿ ಫ್ರೆಂಡ್ಸ್ ತಂಡ ಆಚರಿಸಿತು.
ಈಗಾಗಲೇ ಹಲವು ಸೇವಾ ಯೋಜನೆಗಳಿಗೆ ಸಹಾಯ ಹಸ್ತ ಚಾಚುತ್ತಿರುವ, ಬಡವರ ನೋವಿಗೆ ತಕ್ಷಣ ಸ್ಪಂದಿಸುವ ಸರಳ ವ್ಯಕ್ತಿತ್ವದ ಶಶಿಧರ್ ಶೆಟ್ಟಿ ಅವರ ಸೇವಾ ಗುಣವನ್ನು ಮೆಚ್ಚಿ ತಾಲೂಕಿನಲ್ಲಿ ಹಲವು ಅಭಿಮಾನಿ ಬಳಗಗಳು ರೂಪುಗೊಂಡಿವೆ.
ಕಳೆದ ಎರಡು ವರುಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ನೆರೆ ಉಂಟಾಗಿದ್ದ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಜನರಿಗೆ ಧ್ರೈರ್ಯ ತುಂಬಿ ಶಶಿಧರ ಶೆಟ್ಟಿ ಅವರು ನೆರವಿನ ಹಸ್ತ ಚಾಚಿದ್ದರು. ಇವರ ಈ ಸೇವೆಗೆ ಇಡೀ ತಾಲೂಕಿನ ಜನತೆಯೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅನೇಕ ಬಡ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ, ಕೊರೊನಾ ಸಂದರ್ಭಗಳಲ್ಲಿ ಜನರಿಗೆ ಆಹಾರ ಕಿಟ್ ವ್ಯವಸ್ಥೆಗಳನ್ನೂ ಗುಜರಾತಿನಲ್ಲಿ ನೆರೆ ಸಂದರ್ಭಗಳಲ್ಲಿ ಇವರ ಸ್ಪಂದನೀಯ ಕಾರ್ಯ ಶ್ಲಾಘನೀಯವಾಗಿದ್ದು ಬಡವ ಶ್ರೀಮಂತ ಎನ್ನುವ ಭೇದ ಭಾವ ತೋರದೆ ಎಲ್ಲರಲ್ಲೂ ಸದಾ ನಗು ನಗುತ್ತಾ ಮಾತನಾಡುವ ಇವರ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ಕಳೆಂಜ ಗೋಶಾಲೆಯ ಗೋವುಗಳಿಗೆ 6 ಕ್ಚಿಂಟಲ್ ಹಿಂಡಿ, 2ಮನೆಗಳಿಗೆ 50kg ಅಕ್ಕಿ ಆಹಾರ ಸಾಮಾಗ್ರಿಗಳು ಹಾಗೂ ಅರ್ಥಿಕ ಸಮಸ್ಯೆಯಲ್ಲಿ ಇರುವ ಮನೆಯ ಕೆಲಸಕ್ಕೆ 10 ಗೋಣಿ ಸಿಮೆಂಟ್ ವ್ಯವಸ್ಥೆ ಎಲ್ಲರೂ ಸೇರಿ ನೀಡಿದ್ದೇವೆ ಎಂದು ಸಾಯಿ ರಾಂ ಫ್ರೆಂಡ್ಸ್ ನ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಸಂದರ್ಭದಲ್ಲಿ ಸಾಯಿರಾಂ ಪ್ರೆಂಡ್ಸ್ ಹಾಗೂ ನವಶಕ್ತಿ ಪ್ರೆಂಡ್ಸ್ ಸದಸ್ಯರುಗಳಾದ ಶಶಿರಾಜ್ ಶೆಟ್ಟಿ, ಉಮೇಶ್ ಕುಲಾಲ್ , ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ನಿತೀನ್ ಶೆಟ್ಟಿ ಓಡಿಲ್ನಾಳ, ಮಂಜುನಾಥ್ ಬೆಳ್ತಂಗಡಿ, ಪ್ರಜ್ವಲ್, ರಿಜೇಶ್, ಅದರ್ಶ್, ಜಗದೀಶ್ ಕನ್ನಾಜೆ, ಗುರು ಲಾಯಿಲ, ಮೇಘ ಲಾಯಿಲ, ಮನೋಜ್ ಲಾಯಿಲ ಉಪಸ್ಥಿತರಿದ್ದರು.
ಗುಂಡೂರಿ ಸೇವಾಶ್ರಮದಲ್ಲಿ ಬಟ್ಟೆ ವಿತರಿಸಿ, ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ
ಗುಂಡೂರಿ ಸೇವಾಶ್ರಮದ ಎಲ್ಲ ಬಂಧುಗಳಿಗೆ ಹೊಸ ಬಟ್ಟೆಗಳನ್ನು ವಿತರಿಸಿ ಅವರೆಲ್ಲರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಶಶಿಧರ್ ಶೆಟ್ಟಿಯವರಿಗೆ ಹುಟ್ಟು ಹಬ್ಬದ ಶುಭ ಹಾರೈಸಲಾಯಿತು.ಈ ಸಂದರ್ಭದಲ್ಲಿ ಪದ್ಮುಂಜ ಸಿಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಲಾಯಿಲ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಬೆಳ್ತಂಗಡಿ ನಗರ ಪಂಚಾಯತ್ ಸದಸ್ಯ ಶರತ್ ಕುಮಾರ್, ಗುತ್ತಿಗೆದಾರ ಪ್ರತೀಶ್ ಪೂಜಾರಿ ಉಪಸ್ಥಿತರಿದ್ದರು.