ಬೆಂಗಳೂರು: ಮಕ್ಕಳ ಕಲಿಕಾ ದೃಷ್ಟಿ ಹಾಗೂ ತರಗತಿ ಆರಂಭಿಸುವಂತೆ ಖಾಸಗಿ ಶಾಲಾ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಹಿನ್ನೆಲೆ ಆಗಸ್ಟ್ 23 ರಿಂದ 10ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಶಾಲಾ ಆರಂಭಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ಶಾಲೆ, ಕಾಲೇಜು ಆರಂಭದ ಕುರಿತು ರೂಪ್ಸಾ ಸಂಘದ ಹಾಲನೂರು ಲೇಪಾಕ್ಷಿ ಅವರು ಮಾತನಾಡಿ, ಕಳೆದೊಂದು ವರ್ಷದಿಂದ ಸರ್ಕಾರಕ್ಕೆ ಶಾಲಾರಂಭ ಮಾಡಲು ಒತ್ತಾಯ ಮಾಡಲಾಗಿತ್ತು. ಇದೀಗ ಸಿಎಂ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮುಂದೆ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.